ADVERTISEMENT

ದೆಹಲಿ | ಮಹಿಳೆಯರಿಗೆ ಆರ್ಥಿಕ ನೆರವು ಯಾವಾಗ ಸಿಗುತ್ತದೆ?: ಆತಿಶಿ

ಪಿಟಿಐ
Published 20 ಮಾರ್ಚ್ 2025, 10:27 IST
Last Updated 20 ಮಾರ್ಚ್ 2025, 10:27 IST
ಆತಿಶಿ
ಆತಿಶಿ   

ನವದೆಹಲಿ: ರಾಷ್ಟ್ರ ರಾಜಧಾನಿಯ ಮಹಿಳೆಯರಿಗೆ ಮಾಸಿಕ ₹2500 ಆರ್ಥಿಕ ನೆರವು ಯಾವಾಗ ಸಿಗುತ್ತದೆ ಎಂದು ಎಎಪಿ ನಾಯಕಿ ಆತಿಶಿ ಇಂದು (ಗುರುವಾರ) ಪ್ರಶ್ನಿಸಿದ್ದಾರೆ.

26 ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಮಹಿಳೆಯರಿಗೆ ಮಾಸಿಕ ₹2500 ನೆರವು ನೀಡುವ 'ಮಹಿಳಾ ಸಮೃದ್ಧಿ ಯೋಜನೆ'ಗೆ ಅನುಮೋದನೆ ನೀಡಿತ್ತು. ಇದಕ್ಕಾಗಿ ₹5,100 ಕೋಟಿ ಮೀಸಲಿರಿಸಿತ್ತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಅತಿಶಿ, '18 ವರ್ಷ ಮೇಲ್ಪಟ್ಟ ಸುಮಾರು 48 ಲಕ್ಷ ಮಹಿಳೆಯರಿಗೆ ಆರ್ಥಿಕ ನೆರವು ಯಾವಾಗ ನೀಡಲಿದ್ದಾರೆ? 12 ದಿನಗಳ ಹಿಂದೆ ಬಿಜೆಪಿ ಸರ್ಕಾರವು ಸಮಿತಿಯನ್ನು ರಚಿಸಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ನೋಂದಣಿ ನಡೆಯಲಿದೆಯೇ' ಎಂದು ಪ್ರಶ್ನಿಸಿದ್ದಾರೆ.

ADVERTISEMENT

ದೆಹಲಿ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ, ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಬಂದರೆ ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗೆ ಮಹಿಳಾ ಸಮೃದ್ಧಿ ಯೋಜನೆಯಡಿ ತಿಂಗಳಿಗೆ ₹2500 ನೀಡುವುದಾಗಿ ಭರವಸೆ ನೀಡಿತ್ತು.

70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 48 ಸ್ಥಾನಗಳನ್ನು ಗೆದ್ದು ಬಿಜೆಪಿ 26 ವರ್ಷಗಳ ಬಳಿಕ ಅಧಿಕಾರ ಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.