ADVERTISEMENT

ಚೆನ್ನೈ ನಗರವನ್ನು ಸಂಪೂರ್ಣ ಲಾಕ್‌ಡೌನ್‌ನಲ್ಲಿ ಇಡಬಾರದೇಕೆ: ಹೈಕೋರ್ಟ್‌

ಪಿಟಿಐ
Published 11 ಜೂನ್ 2020, 14:09 IST
Last Updated 11 ಜೂನ್ 2020, 14:09 IST
ಚೆನ್ನೈ ನಗರದಲ್ಲಿ  ಕಂಡು ಬಂದ ದೃಶ್ಯ
ಚೆನ್ನೈ ನಗರದಲ್ಲಿ ಕಂಡು ಬಂದ ದೃಶ್ಯ   

ಚೆನ್ನೈ : ಚೆನ್ನೈ ನಗರದಲ್ಲಿ ಕೋವಿಡ್‌– 19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಕೆಲ ಸಮಯ ನಗರವನ್ನು ಸಂಪೂರ್ಣ ಲಾಕ್‌ಡೌನ್‌ನಲ್ಲಿ ಇಡಬಾರದೇಕೆ ಎಂದುಮದ್ರಾಸ್ ಹೈಕೋರ್ಟ್‌ ಗುರುವಾರ ಪ್ರಶ್ನಿಸಿದೆ.

ತಮಿಳುನಾಡು ಸರ್ಕಾರವು ಕ್ರಮ ಕೈಗೊಂಡಿದ್ದರೂ ನಗರ ಹಾಗೂ ಹೊರವಲಯ ಭಾಗದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಅಪಾಯದ ಹಂತವನ್ನು ತಲುಪಿದೆ ಎಂದು ನ್ಯಾಯಮೂರ್ತಿಗಳಾದ ವಿನೀತ್‌‌ ಕೊಠಾರಿ ಹಾಗೂ ಆರ್‌.ಸುರೇಶ್‌ಕುಮಾರ್‌ ಅವರನ್ನು ಒಳಗೊಂಡ ಪೀಠವು ತಿಳಿಸಿದೆ.

ಸರ್ಕಾರವು ವೈರಸ್‌ ನಿಯಂತ್ರಣಕ್ಕೆ ವಿಶೇಷ ಯೋಜನೆಗಳನ್ನು ರೂಪಿಸಿದ್ದರೆ, ಆ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತೇವೆ. ರಾಜ್ಯ ಹಾಗೂ ನಗರದ ಪ್ರಜೆಯಾಗಿ ಲಾಕ್‌ಡೌನ್‌ ಅನುಷ್ಠಾನಗೊಳಿಸುವ ಬಗ್ಗೆ ಪ್ರಶ್ನೆ ಎತ್ತಿದ್ದೇವೆ ಹೊರತು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪ್ರಸ್ತಾಪಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.