ADVERTISEMENT

ಆಂಬುಲೆನ್ಸ್‌ಗಾಗಿ ಗರ್ಭಿಣಿಯನ್ನು ಹೊತ್ತು 12 ಕಿಮೀ ನಡೆದರು; ದಾರಿಯಲ್ಲಿ ಹೆರಿಗೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 7:23 IST
Last Updated 31 ಜುಲೈ 2018, 7:23 IST
ಕೃಪೆ: ಎನ್‍ಡಿಟಿವಿ
ಕೃಪೆ: ಎನ್‍ಡಿಟಿವಿ   

ಹೈದರಾಬಾದ್: ಆಂಧ್ರ ಪ್ರದೇಶದ ಜಿಂದಮ್ಮಾ ಎಂಬಾಕೆ 8 ತಿಂಗಳ ಗರ್ಭಿಣಿ.ಮನೆಯ ಸಮೀಪ ಆಂಬುಲೆನ್ಸ್ ಬರಲು ಸೌಕರ್ಯವಿಲ್ಲ. ಅದು ಕಾಡಿನ ದಾರಿ. ಹೀಗಿರುವಾಗ ಹೆರಿಗೆ ನೋವು ಕಾಣಿಸಿಕೊಂಡ ಈಕೆಯನ್ನು ಪತಿ ಮತ್ತು ಊರಿನವರು ಸೇರಿ 12 ಕಿ.ಮೀ ದೂರ ಹೊತ್ತುಕೊಂಡು ಹೋಗಿದ್ದಾರೆ.ದಾರಿ ಮಧ್ಯೆ ಈಕೆಗೆ ಹೆರಿಗೆಯಾಗಿದ್ದು, ಮಗು ಮೃತಪಟ್ಟಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ಬಿದಿರಿನಿಂದ ಮಾಡಿದ ಸ್ಟ್ರೆಚರ್ನಲ್ಲಿ ಪತ್ನಿಯನ್ನು ಕೂರಿಸಿಹೊತ್ತುಕೊಂಡು ಹೋಗುತ್ತಿರುವ ದೃಶ್ಯವನ್ನು ಎನ್‍ಡಿಟಿವಿ ಪ್ರಸಾರ ಮಾಡಿದೆ.

ಎರಡು ಮಕ್ಕಳ ತಾಯಿಯಾಗಿರುವ ಜಿಂದಮ್ಮಾ ಅವರಿಗೆ ಅಧಿಕ ರಕ್ತಸ್ರಾವವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಆಂಧ್ರ ಪ್ರದೇಶದ ವಿಜಯನಗರಂನಲ್ಲಿ ಇಂಥಾ ಘಟನೆಗಳು ಹೊಸತೇನೂ ಅಲ್ಲ.ಬುಡಕಟ್ಟು ಜನರು ವಾಸಿಸುತ್ತಿರುವ ಈ ಪ್ರದೇಶಕ್ಕೆ ಸರಿಯಾದ ರಸ್ತೆಗಳಿಲ್ಲ.

ರಸ್ತೆ ಮತ್ತು ಆರೋಗ್ಯ ಸೇವಾ ಕೇಂದ್ರಗಳಿಲ್ಲದ ಈ ಪ್ರದೇಶವನ್ನು ರಾಜಕೀಯ ಪಕ್ಷಗಳು ಕಡೆಗಣಿಸಿವೆ ಎಂದು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ದೂರಿದ್ದಾರೆ.ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಪವನ್ ಸಿದ್ಧತೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.