ADVERTISEMENT

ಗೆಳೆಯ ವಿಡಿಯೊ ಕಾಲ್‌ನಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡ ಯುವತಿ: ಕಿರುಕುಳದ ಆರೋಪ

ಪಿಟಿಐ
Published 31 ಆಗಸ್ಟ್ 2025, 13:47 IST
Last Updated 31 ಆಗಸ್ಟ್ 2025, 13:47 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಠಾಣೆ: 23 ವರ್ಷದ ಯುವತಿಯೊಬ್ಬರು ಗೆಳೆಯನಿಗೆ ವಿಡಿಯೊ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ವರದಿಯಾಗಿದೆ. ಕಿರುಕುಳ ನೀಡಿ ಹಾಗೂ ಬ್ಲಾಕ್‌ಮೇಲ್‌ ಮಾಡಿದ ಆರೋಪದಲ್ಲಿ ಆಕೆಯ ಗೆಳೆಯನನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ತಿಟ್ವಾಲ ಪ್ರದೇಶದಲ್ಲಿ ಗುರುವಾರ ಘಟನೆ ನಡೆದಿದೆ.

ADVERTISEMENT

'ಯುವತಿಯ ಗೆಳೆಯನನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದೇವೆ. ಆತ ಇದೇ ರೀತಿ ಹಲವು ಯುವತಿಯರಿಗೆ ವಂಚಿಸಿದ್ದಾನೆ ಎಂದು ಮೃತ ಯುವತಿಯ ಕುಟುಂಬದವರು ಆರೋಪಿಸಿದ್ದಾರೆ' ಎಂದು ತಿಟ್ವಾಲ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿ ಹಾಗೂ ಆರೋಪಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದರು. ಬಳಿಕ, ಇಬ್ಬರೂ ಹತ್ತಿರವಾಗಿದ್ದರು ಎನ್ನಲಾಗಿದೆ.

'ಆರೋಪಿಯು ಹಲವು ಕಾರಣಗಳನ್ನು ನೀಡಿ ಯುವತಿಯಿಂದ ಆಭರಣಗಳನ್ನು ಪಡೆದುಕೊಂಡಿದ್ದ. ಅವನ್ನೆಲ್ಲ ವಾಪಸ್‌ ಕೇಳಿದಾಗ, ಆಕೆಯ ಖಾಸಗಿ ವಿಡಿಯೊಗಳನ್ನು ಸಾರ್ವಜನಿಕವಾಗಿ ಹರಿಬಿಡುವುದಾಗಿ ಬೆದರಿಸಲಾರಂಭಿಸಿದ್ದ' ಎಂದು ಕುಟುಂಬದವರು ಆರೋಪಿಸಿದ್ದಾರೆ.

'ಯುವತಿಯು ಕಿರುಕುಳ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ ಎಂದು ದೂರಿರುವ ಕುಟುಂಬದವರು, ಆಕೆಯ ಮೊಬೈಲ್‌ ನೋಡಿದಾಗ ಗೆಳೆಯನೊಂದಿಗೆ ವಿಡಿಯೊ ಕರೆಯಲ್ಲಿದ್ದದ್ದು ಗೊತ್ತಾಯಿತು ಎಂದಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆದಾಗ್ಯೂ, 'ಶವಪರೀಕ್ಷೆ ನಡೆಸದೆ ಅಂತ್ಯಸಂಸ್ಕಾರ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.