ADVERTISEMENT

ಉತ್ತರ ಪ್ರದೇಶ | ಮದುವೆ ನಂತರ ಪತ್ನಿ ದಪ್ಪ ಆಗಿದ್ದಾಳೆ ಎಂದು ತಲಾಖ್ ನೀಡಿದ ಪತಿ

ಐಎಎನ್ಎಸ್
Published 4 ಸೆಪ್ಟೆಂಬರ್ 2022, 9:07 IST
Last Updated 4 ಸೆಪ್ಟೆಂಬರ್ 2022, 9:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೀರತ್‌: ಮದುವೆಯ ಬಳಿಕ ಪತ್ನಿ ತುಂಬಾ ದಪ್ಪ ಆಗಿದ್ದಾಳೆ ಎಂದು ಆರೋಪಿಸಿ ಆಕೆಯ ಪತಿ ತ್ರಿವಳಿ ತಲಾಖ್‌ ನೀಡಿರುವ ಪ್ರಕರಣ ಉತ್ತರ ಪ್ರದೇಶದ ಮೀರತ್‌ನಲ್ಲಿ ವರದಿಯಾಗಿದೆ.

ಈ ಬಗ್ಗೆ ಸಂತ್ರಸ್ತ ಮಹಿಳೆ ನಜ್ಮಾ ಬೇಗಂ (28) ಅವರು ಪತಿಮೊಹಮ್ಮದ್‌ ಸಲ್ಮಾನ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 8 ವರ್ಷಗಳ ಹಿಂದೆ ಮದುವೆ ಆಗಿದ್ದ ಈ ದಂಪತಿಗೆ 7 ವರ್ಷದ ಮಗುವಿದೆ.

ತಮ್ಮ ದೇಹದ ತೂಕ ಹೆಚ್ಚಾಗುತ್ತಿದ್ದಂತೆ, ಪತಿ ತಮ್ಮನ್ನು ಮೂದಲಿಸಲು ಹಾಗೂ ಕಿರುಕುಳ ನೀಡಲಾರಂಭಿಸಿದರು. ತಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪೋಷಕರೊಂದಿಗೆ ಇರುವುದಾಗಿ ಬೇಗಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಮಹಿಳೆಯ ದೂರು ಆಧರಿಸಿ ಸಲ್ಮಾನ್‌ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ಸೆಕ್ಷನ್‌ 3/4 ಪ್ರಕಾರ ಹಾಗೂ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

'ಸಲ್ಮಾನ್‌, ಇತರ ಐವರೊಂದಿಗೆ ಆಗಸ್ಟ್‌ 28ರಂದು ತಮ್ಮ ಪೋಷಕರ ಮನೆಗೆ ಬಂದು ಥಳಿಸಿದ್ದರು. ನಂತರ ತ್ರಿವಳಿ ತಲಾಖ್‌ ಹೇಳಿ ತೆರಳಿದರು ಎಂದು ನಜ್ಮಾ ದೂರಿನಲ್ಲಿ ತಿಳಿಸಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೀರತ್‌ನ ಕೊತ್ವಾಲಿ ಸರ್ಕಲ್‌ ಆಫಿಸರ್‌ ಅರವಿಂದ್ ಕುಮಾರ್‌ ಚೌರಾಸಿಯಾ, ತನಿಖೆ ಪ್ರಗತಿಯಲ್ಲಿದೆ. ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.