ADVERTISEMENT

ಬಿಟ್‌ ಕಾಯಿನ್ ಹೆಸರಲ್ಲಿ ವಂಚನೆ: ₹26 ಲಕ್ಷ ಕಳೆದುಕೊಂಡ ಮಹಾರಾಷ್ಟ್ರದ ಮಹಿಳೆ

ಪಿಟಿಐ
Published 6 ಜನವರಿ 2024, 14:29 IST
Last Updated 6 ಜನವರಿ 2024, 14:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಥಾಣೆ: ಆನ್‌ಲೈನ್ ಮೂಲಕ ಬಿಟ್ ಕಾಯಿನ್‌ಗೆ ಹಣ ಹೂಡುವಂತೆ ಆಮಿಷ ಒಡ್ಡಿದ ವಂಚಕರ ಜಾಲಕ್ಕೆ ಸಿಲುಕಿ ಮಹಾರಾಷ್ಟ್ರದ ಮಹಿಳೆಯೊಬ್ಬರು ₹26.88 ಲಕ್ಷ ಕಳೆದುಕೊಂಡಿದ್ದಾರೆ.

ವಂಚನೆಗೊಳಗಾದ 33 ವರ್ಷದ ಮಹಿಳೆ ದೂರು ನೀಡಿದ್ದು, ಕಪೂರ್‌ಬಾವ್ಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ADVERTISEMENT

ಬಿಟ್‌ಕಾಯಿನ್ ಕುರಿತು ಪ್ರಕಟವಾಗಿದ್ದ ಜಾಹೀರಾತು ಒಂದರಲ್ಲಿ ಇದ್ದ ಫೋನ್‌ ಸಂಖ್ಯೆಗೆ ಕರೆ ಮಾಡಿದ ಮಹಿಳೆ, ಅವರ ಸಲಹೆಯಂತೆ ಕಳೆದ ಒಂದು ವರ್ಷದಲ್ಲಿ ₹26.88 ಲಕ್ಷ ಪಾವತಿಸಿದ್ದಾರೆ. ಆನ್‌ಲೈನ್‌ನಲ್ಲಿ ಇವರಿಗಾಗಿಯೇ ಪ್ರತ್ಯೇಕ ಲಾಗಿನ್ ನೀಡಲಾಗಿತ್ತು. ಹೂಡಿಕೆಯಿಂದ ಬಂದ ಹಣವನ್ನು ಮರಳಿ ಪಡೆಯಲು ಇದರಲ್ಲಿ ಅವಕಾಶ ಇರುವುದಾಗಿ ಹೇಳಿದ್ದರು ಎಂದು ದೂರಿನಲ್ಲಿ ಮಹಿಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಆದರೆ ಈ ಲಾಗಿನ್‌ ಬಳಸಿ ಹಣ ಪಡೆಯಲು ಪ್ರಯತ್ನಿಸಿದರೆ ಅಲ್ಲಿ ಸಮಸ್ಯೆ ಎದುರಾಯಿತು. ಯಾವುದೇ ಹಣ ನನಗೆ ಸಿಗಲಿಲ್ಲ’ ಎಂದಿದ್ದಾರೆ.

ಈ ಕುರಿತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.