ADVERTISEMENT

ಆಸ್ತಿಗಾಗಿ ಅಜ್ಜಿಗೆ ವಾಹನದಿಂದ ಗುದ್ದಿಸಿ ಕೊಂದ ಮೊಮ್ಮಗ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 9:34 IST
Last Updated 19 ಡಿಸೆಂಬರ್ 2025, 9:34 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಜಾಜ್‌ಪುರ(ಒಡಿಶಾ): ಜಮೀನು ವಿವಾದದ ಹಿನ್ನೆಲೆಯಲ್ಲಿ ಮೊಮ್ಮಗನೇ 70 ವರ್ಷದ ಅಜ್ಜಿಗೆ ವಾಹನದಿಂದ ಗುದ್ದಿಸಿಕೊಲೆ ಮಾಡಿರುವ ಘಟನೆ ಒಡಿಶಾದ ಜಾಜ್‌ಪುರದಲ್ಲಿ ನಡೆದಿದೆ.

ADVERTISEMENT

ಪಾನಿಕೊಯ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಖಡರಾಪುರ–ಸಿಣಗಡಾ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. 23 ವರ್ಷದ ವ್ಯಕ್ತಿ ತನ್ನ ಅಜ್ಜಿ ಕುಲಿ ಸಾಹೂ ಅವರನ್ನು ಕೊಂದಿದ್ದಾನೆ.

ಮಹಿಳೆಯನ್ನು ಆತನ ಮಗ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಹಾಗಾಗಿ, ಆಕೆ ತನ್ನ ಮಗಳ ಮನೆಯಲ್ಲಿ ವಾಸವಾಗಿದ್ದರು ಎಂದು ವರದಿ ತಿಳಿಸಿದೆ.

ತಮ್ಮ ಮಗನ ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ನೊಂದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡುವ ಜೊತೆಗೆ ತಮ್ಮ ಪಾಲಿನ ಭೂಮಿಯನ್ನು ಮಗಳಿಗೆ ಉಡುಗೊರೆಯಾಗಿ ನೀಡಿದ್ದರು.ಇದು ಜಮೀನು ವಿವಾದಕ್ಕೆ ಎಡೆ ಮಾಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೊಮ್ಮಗನ ವಾಹನ ಡಿಕ್ಕಿ ಹೊಡೆದ ಕೂಡಲೇ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಮ್ಮಗ ಸ್ಥಳದಿಂದ ಪರಾರಿಯಾಗಿದ್ದಾನೆ. ಅಜ್ಜಿಯ ಜೊತೆಯಲ್ಲಿದ್ದ ಮಗಳು ಹೇಗೋ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಮಗಳ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.