ಚಾಕು
(ಸಾಂದರ್ಭಿಕ ಚಿತ್ರ)
ಜಲಗಾಂವ್: 'ಮಹಿಳೆಯರು ಆತ್ಮರಕ್ಷಣೆಗಾಗಿ ತಮ್ಮ ಪರ್ಸ್‌ನಲ್ಲಿ ಲಿಪ್‌ಸ್ಟಿಕ್ ಜೊತೆ ಚಾಕು, ಮೆಣಸಿನ ಪುಡಿ ಇರಿಸಬೇಕು' ಎಂದು ಮಹಾರಾಷ್ಟ್ರದ ಸಚಿವ ಗುಲಾಬ್‌ರಾವ್ ಪಾಟೀಲ್ ಇಂದು (ಶನಿವಾರ) ಹೇಳಿಕೆ ನೀಡಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಸೇನಾ ಮುಖಂಡ ಗುಲಾಬ್‌ರಾವ್, ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಒತ್ತಿ ಹೇಳಿದರು.
'ನಾವು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರೂ ಅಹಿತಕರ ಘಟನೆಗಳು ಘಟಿಸುತ್ತಿವೆ. ಶಿವಸೇನಾ ಮುಖಂಡ ಬಾಳಾ ಠಾಕ್ರೆ ಅವರ ಆಲೋಚನೆಗಳಿಂದ ನಾವು ಪ್ರೇರಿತರಾಗಿದ್ದೇವೆ. ಮಹಿಳೆಯರು ಲಿಪ್‌ಸ್ಟಿಕ್ ಜೊತೆಗೆ ಮೆಣಸಿನ ಪುಡಿ ಮತ್ತು ಚಾಕುವನ್ನು ಒಯ್ಯಬೇಕು ಎಂದು ಹೇಳಿದ್ದಕ್ಕಾಗಿ ಪತ್ರಕರ್ತರು ಅವರನ್ನು ತೀವ್ರವಾಗಿ ಟೀಕಿಸಿದ್ದರು' ಎಂದು ಅವರು ಹೇಳಿದ್ದಾರೆ.
'ಆದರೆ ಇಂದು ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಹೆಣ್ಣುಮಕ್ಕಳು ಆತ್ಮರಕ್ಷಣೆಗಾಗಿ ಇಂತಹ ವಸ್ತುಗಳನ್ನು ಕೊಂಡೊಯ್ಯಬೇಕು ಎಂದು ನಾನು ವಿನಂತಿಸುತ್ತೇನೆ' ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಫೆಬ್ರುವರಿ 25ರಂದು ಪುಣೆಯ ಎಂಎಸ್ಆರ್‌ಟಿಸಿ ಡಿಪೋದಲ್ಲಿ 26 ವರ್ಷದ ಯುವತಿಯ ಮೇಲಿನ ಅತ್ಯಾಚಾರ ಘಟನೆಯನ್ನು ಅವರು ಉಲ್ಲೇಖಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.