ADVERTISEMENT

ಮಹಿಳೆಯರಿಗೆ ಇತಿಹಾಸ ಮತ್ತು ಭವಿಷ್ಯವನ್ನು ಸೃಷ್ಟಿಸುವ ಸಾಮರ್ಥ್ಯವಿದೆ: ರಾಹುಲ್‌

ಪಿಟಿಐ
Published 8 ಮಾರ್ಚ್ 2021, 7:26 IST
Last Updated 8 ಮಾರ್ಚ್ 2021, 7:26 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ’ಮಹಿಳೆಯರು ಇತಿಹಾಸ ಮತ್ತು ಭವಿಷ್ಯವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.ನಿಮ್ಮನ್ನು ತಡೆಯಲು ಯಾರಿಗೂ ಬಿಡಬೇಡಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘ಮಹಿಳೆಯರಿಗೆ ಧ್ವನಿ ಎತ್ತಲು ಹೆಚ್ಚು ಅವಕಾಶವನ್ನು ಕಲ್ಪಿಸುವುದೇ ಮಹಿಳಾ ಸಬಲೀಕರಣದ ಅಡಿಪಾಯವಾಗಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟ್ವೀಟ್ ಮಾಡಿದ್ದಾರೆ.

‘ಮಹಿಳಾ ಜನಪ್ರತಿನಿಧಿಗಳು, ವಕೀಲೆಯರು, ಪೈಲಟ್‌ಗಳು, ಉದ್ಯಮಿಗಳು, ವೈದ್ಯರು, ಪತ್ರಕರ್ತೆಯರು, ಕ್ರೀಡಾಪಟುಗಳು ಮತ್ತು ಕಲಾವಿದರು ಹೆಚ್ಚುತ್ತಿದ್ದಂತೆ ಜಗತ್ತು ಇನ್ನಷ್ಟು ಸುಂದರ ಮತ್ತು ಶಕ್ತಿಯುತವಾಗಿ ಕಾಣುತ್ತದೆ’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ADVERTISEMENT

‘ಕಾಂಗ್ರೆಸ್‌ನ ನೀತಿಯು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ನಾಯಕತ್ವವನ್ನು ಸದೃಢಗೊಳಿಸಿದೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ಮಹಿಳೆಯೊಬ್ಬಳು ದೇಶದ ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ, ಸರಪಂಚ್‌ ಆಗಿ ದೇಶವನ್ನು ಹೇಗೆ ಮುನ್ನೆಡೆಸಬೇಕು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಾರಿ ಶಕ್ತಿಯ ಮೂಲಕ ನಮ್ಮ ಪೂರ್ವಜರು ತೋರಿಸಿಕೊಟ್ಟ ನಿಜವಾದ ಭಾರತದ ಪರಿಕಲ್ಪನೆಯನ್ನು ಸಾಧಿಸಬಹುದು. ನಾವು ಎಲ್ಲರೂ ಮಹಿಳೆಯರ ಜತೆಗೆ ನಿಲ್ಲೋಣ. ಮಹಿಳೆಯರ ಜೊತೆಗೆ ಸಮಾನವಾಗಿ ಮುನ್ನಡೆಯೋಣ’ ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ಕರೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.