ADVERTISEMENT

ಫೆವಿಕಾಲ್‌ನಂತೆ 'ಜಾತ್ಯತೀತ' ಪದ ಬಳಕೆ: ಬಿಜೆಪಿ ನಾಯಕ ಶಹನವಾಜ್ ಹುಸೇನ್

ಪಿಟಿಐ
Published 20 ಜೂನ್ 2023, 2:14 IST
Last Updated 20 ಜೂನ್ 2023, 2:14 IST
ಬಿಜೆಪಿ ನಾಯಕ ಶಾನವಾಜ್ ಹುಸೇನ್ (ಪಿಟಿಐ ಚಿತ್ರ)
ಬಿಜೆಪಿ ನಾಯಕ ಶಾನವಾಜ್ ಹುಸೇನ್ (ಪಿಟಿಐ ಚಿತ್ರ)   

ಪ್ರಯಾಗರಾಜ : ಯಾವುದಾದರೊಂದು ಪದ ಈ ದೇಶ ಮತ್ತು ದೇಶದ ಮುಸ್ಲಿಂ ಸಮುದಾಯಕ್ಕೆ ಹಾನಿ ಮಾಡಿದ್ದರೆ ಅದು 'ಜಾತ್ಯತೀತ' ಪದ. ಮತಬ್ಯಾಂಕ್‌ಗಾಗಿ 'ಜಾತ್ಯತೀತ' ಎಂಬ ಪದವನ್ನು ಫೆವಿಕಾಲ್‌ನಂತೆ ಬಳಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕ ಶಹನವಾಜ್ ಹುಸೇನ್ ಹೇಳಿದರು.

ಪ್ರಯಾಗರಾಜ ಜಿಲ್ಲೆಯ ಕಾರ್ಚನಾದಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಅವರು(ಕಾಂಗ್ರೆಸ್‌) ಕಳೆದ 75 ವರ್ಷಗಳಿಂದ ಮುಸ್ಲಿಮರನ್ನು ಹೆದರಿಸಿ ಮತಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಜಾತ್ಯತೀತೆಯ ಅಂಗಡಿ ಇದೀಗ ಮುಚ್ಚುತ್ತಾ ಬರುತ್ತಿದೆ‘ ಎಂದು ಮಾರ್ಮಿಕವಾಗಿ ನುಡಿದರು.

ಲೋಕಸಭಾ ಚುನಾವಣೆಯ ಸಲುವಾಗಿ ಇದೇ 23ಕ್ಕೆ ಬಿಹಾರದ ಪಾಟ್ನಾದಲ್ಲಿ ನಡೆಯುವ ಪ್ರತಿಪಕ್ಷ ನಾಯಕರ ಸಭೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ‘ಬಿಹಾರಕ್ಕೆ ಬರುವವರು (ಪ್ರತಿಪಕ್ಷ ನಾಯಕರುಗಳು) ಅಲ್ಲಿ ಬಂದು ಅಂತರಾಷ್ಟ್ರೀಯ ಲಿಟ್ಟಿ ಚೋಖಾ(ಬಿಹಾರದ ಜನಪ್ರಿಯ ತಿಳಿಸು) ಮಾಡುತ್ತಾರೆ. ಐದು ಸೆಕೆಂಡುಗಳ ಕಾಲ ತಮ್ಮ ಕೈಗಳನ್ನು ಮೇಲಕ್ಕೆತ್ತಿ, ನಂತರ ತಮ್ಮ ದಾರಿ ಹಿಡಿಯುತ್ತಾರೆ‘ ಎಂದು ವ್ಯಂಗ್ಯ ಮಾಡಿದರು.

ADVERTISEMENT

ಈ ವೇಳೆ ರಾಜ್ಯ ಸಂಪುಟ ಸಚಿವ ನಂದಗೋಪಾಲ್ ಗುಪ್ತಾ ನಂದಿ, ಅಲಹಾಬಾದ್‌ ಲೋಕಸಭಾ ಸಂಸದ ರೀಟಾ ಬಹುಗುಣ ಜೋಶಿ, ಕರ್ಚನಾ ಶಾಸಕ ಪಿಯೂಷ್ ರಂಜನ್ ನಿಶಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.