ಬಂಧಿತ ಆರೋಪಿಗಳು
ಪಿಟಿಐ
ಮೀರಠ್: ‘ಅವಳು ಹುಟ್ಟದಿದ್ದರೆ ಚೆನ್ನಾಗಿತ್ತು....’ ಸೌರವ್ ಹತ್ಯೆ ಪ್ರಕರಣದಲ್ಲಿ ಬಂಧಿತಳಾಗಿರುವ ಮುಸ್ಕಾನ್ ರಸ್ತೋಗಿ ಪೋಷಕರ ಆಕ್ರೋಶದ ನುಡಿಗಳಿವು...
ಸರಕು ಸಾಗಣೆ ಹಡಗು ಕಂಪನಿಯೊಂದರಲ್ಲಿ ಅಧಿಕಾರಿಯಾಗಿದ್ದ ಪತಿ ಸೌರವ್‌ನನ್ನು ಪ್ರಿಯಕರನ ನೆರವಿನಿಂದ ಮುಸ್ಕಾನ್ ಹತ್ಯೆ ಮಾಡಿದ್ದಳು. ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ, ಡ್ರಮ್‌ವೊಂದರಲ್ಲಿ ಇರಿಸಿ ಸಿಮೆಂಟ್‌ನಿಂದ ಮುಚ್ಚಿಟ್ಟಿದ್ದರು.
‘ನಮ್ಮ ಮಗಳಿಗಾಗಿ ಸೌರವ್ ತನ್ನ ಕೆಲಸ ಮತ್ತು ಕುಟುಂಬ ಎರಡನ್ನೂ ಬಿಟ್ಟು ಬಂದಿದ್ದನು. ಆದರೆ, ಅವಳು ಅವನ ಪ್ರಾಣವನ್ನೇ ತೆಗೆದುಕೊಂಡಳು’ ಎಂದು ಮುಸ್ಕಾನ್ ಪೋಷಕರು ಸುದ್ದಿಗಾರರ ಮುಂದೆ ಕಂಬನಿ ಮಿಡಿದಿದ್ದಾರೆ.
‘ಸೌರವ್ ನನ್ನ ಮಗಳನ್ನು ತುಂಬಾ ಪ್ರೀತಿಸುತ್ತಿದ್ದನು. ಆತನ ಹೆತ್ತವರ ಬಳಿ ಕೋಟಿಗಟ್ಟಲೆ ಹಣವಿದ್ದರೂ ಮುಸ್ಕಾನ್‌ಗಾಗಿ ಅದನ್ನು ಬಿಟ್ಟು ಬಂದಿದ್ದ. ಆದರೆ, ಮುಸ್ಕಾನ್ ಸಾಹಿಲ್ ಶುಕ್ಲಾನ ಪ್ರೀತಿಯಲ್ಲಿ ಬಿದ್ದಿದ್ದಳು. ಅವನ ಸಹವಾಸದಿಂದ ಮಾದಕ ವ್ಯಸನಿಯಾದಳು. ಅದರ ಸೇವೆನೆಯಿಂದ 10 ಕೆ.ಜಿ ತೂಕ ಕಳೆದುಕೊಂಡಿದ್ದಳು. ಮೊದಲಿನಿಂದಲೂ ಅವಳು ದುರಹಂಕಾರಿಯಾಗಿದ್ದಳು. ಅವರಿಬ್ಬರಿಗೂ ಮರಣದಂಡನೆ ವಿಧಿಸಬೇಕು’ ಎಂದು ಮುಸ್ಕಾನ್ ತಂದೆ ಪ್ರಮೋದ್ ರಸ್ತೋಗಿ ಒತ್ತಾಯಿಸಿದ್ದಾರೆ.
‘2016ರಲ್ಲಿ ಮುಸ್ಕಾನ್–ಸೌರವ್ ಮದುವೆಯಾಗಿತ್ತು. ಅಲ್ಲಿಂದಲೂ ಮುಸ್ಕಾನ್ ತನ್ನ ಅತ್ತೆ-ಮಾವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಅವರೊಂದಿಗೆ ಅವಳು ಹೊಂದಿಕೊಳ್ಳುತ್ತಿರಲಿಲ್ಲ’ ಎಂದು ಮುಸ್ಕಾನ್ ತಾಯಿ ಕವಿತಾ ರಸ್ತೋಗಿ ಹೇಳಿದ್ದಾರೆ.
‘ಮಗ ಸೊಸೆಯ ಸುಖಕ್ಕಾಗಿ ಇಷ್ಟು ದಿನ ಎಲ್ಲವನ್ನು ಸಹಿಸಿಕೊಂಡಿದ್ದೇವು. ಈಗ ಆಕೆ ನನ್ನ ಮಗನನ್ನೇ ಕೊಂದಳು’ ಎಂದು ಸೌರವ್ ತಾಯಿ ರೇಣು ದೇವಿ ದುಃಖ ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.