ADVERTISEMENT

ಆರೋಗ್ಯ ರಕ್ಷಣೆಗಾಗಿ ಯೋಗ: ರಾಷ್ಟ್ರಪತಿ, ಉಪ ರಾಷ್ಟ್ರಪತಿ ಪ್ರತಿಪಾದನೆ

ಪಿಟಿಐ
Published 21 ಜೂನ್ 2020, 12:27 IST
Last Updated 21 ಜೂನ್ 2020, 12:27 IST
ದೆಹಲಿಯಲ್ಲಿ ಯೋಗಾಸನ ಮಾಡುತ್ತಿರುವ ದೃಶ್ಯ  (ಕೃಪೆ: ಪಿಟಿಐ)
ದೆಹಲಿಯಲ್ಲಿ ಯೋಗಾಸನ ಮಾಡುತ್ತಿರುವ ದೃಶ್ಯ (ಕೃಪೆ: ಪಿಟಿಐ)   

ನವದೆಹಲಿ: ‘ಅಂತರರಾಷ್ಟ್ರೀಯ ಯೋಗ ದಿನ’ವನ್ನು ಭಾನುವಾರ ದೇಶದ ವಿವಿಧೆಡೆ ಆಚರಿಸಿದ್ದು, ಆರೋಗ್ಯ ರಕ್ಷಣೆಯ ಕ್ರಮವಾಗಿ ಯೋಗವನ್ನು ಪಾಲಿಸಬೇಕು ಎಂದು ಪ್ರತಿಪಾದಿಸಲಾಯಿತು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ‘ಕೊರೊನಾ ಸೋಂಕು ಬಾಧಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡಲು ಯೋಗ ಸಹಕಾರಿ ಆಗಿರಲಿದೆ’ ಎಂದು ಕರೆ ನೀಡಿದರು. ಯೋಗದಿನದ ಸಂದೇಶದಲ್ಲಿ, ‘ಯೋಗ ಎಂಬುದು ಜಗತ್ತಿಗೆ ಭಾರತದ ಅತ್ಯುತ್ತಮ ಕೊಡುಗೆ’ ಎಂದರು.

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ‘ಕೋವಿಡ್ ಬಿಕ್ಕಟ್ಟು ಎದುರಿಸುವಲ್ಲಿ ಜನರು ದೈಹಿಕ ಮತ್ತು ಮಾನಸಿಕವಾಗಿ ಶಕ್ತರಾಗಿರುವುದು ಅಗತ್ಯ’ ಎಂದು ಪ್ರತಿಪಾದಿಸಿದರು. ನಿರೋಧಕ ಶಕ್ತಿ ಚೆನ್ನಾಗಿದ್ದರೆ ಸೋಂಕು ಎದುರಿಸುವುದು ಸಾಧ್ಯ ಎಂದು ಹೇಳಿದರು.

ADVERTISEMENT

ಸೋಂಕಿನಿಂದಾಗಿ ಮನಸ್ಸಿನ ಮೇಲೆ ಮೂಡಿರುವ ಒತ್ತಡದಿಂದ ಹೊರಬರಲು ಯೋಗ ಪರಿಣಾಮಕಾರಿಯಾಗಿರುವ ಮಾರ್ಗವಾಗಿದೆ. ಕಡಿಮೆ ವೆಚ್ಚದ ಹಾಗೂ ಹೆಚ್ಚಿನ ಲಾಭದ ಕ್ರಮವಾಗಿದೆ. ಆಧುನಿಕ ಕಾಲಘಟ್ಟದ ಒತ್ತಡಗಳಿಂದಲೂ ಹೊರಬರುವುದು ಯೋಗದಿಂದ ಸಾಧ್ಯವಾಗಲಿದೆ ಎಂದರು.

ವಿವಿಧ ರಾಜ್ಯಗಳಲ್ಲಿಯೂ ಯೋಗ ದಿನವನ್ನು ಕೊರೊನಾ ಸೋಂಕಿನ ಕಾರಣದಿಂದ ಸರಳವಾಗಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.