ADVERTISEMENT

ಸಾಮೂಹಿಕ ಮದುವೆಯಿಂದ ವರದಕ್ಷಿಣೆ, ಬಾಲ್ಯವಿವಾಹ ನಿಯಂತ್ರಿಸಬಹುದು: ಆದಿತ್ಯನಾಥ್

ಪಿಟಿಐ
Published 29 ನವೆಂಬರ್ 2021, 14:31 IST
Last Updated 29 ನವೆಂಬರ್ 2021, 14:31 IST
ಯೋಗಿ ಆದಿತ್ಯನಾಥ್ – ಪಿಟಿಐ ಚಿತ್ರ
ಯೋಗಿ ಆದಿತ್ಯನಾಥ್ – ಪಿಟಿಐ ಚಿತ್ರ   

ಲಖನೌ: ಸಾಮೂಹಿಕ ವಿವಾಹದಂಥ ಸಮುದಾಯ ಕಾರ್ಯಕ್ರಮಗಳಿಂದ ಬಾಲ್ಯವಿವಾಹ ಹಾಗೂ ವರದಕ್ಷಿಣೆ ಪಿಡುಗು ತಡೆಯಬಹುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.

ಗೋರಖ್‌ಪುರ, ದಿಯೊರಿಯಾ, ಮಹಾರಾಜ್‌ಗಂಜ್ ಹಾಗೂ ಕುಶೀನಗರಗಳ 2,503 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಾಮೂಹಿಕ ವಿವಾಹದಿಂದ ಬಾಲ್ಯವಿವಾಹ ತಡೆಗಟ್ಟಬಹುದು. ಯಾಕೆಂದರೆ ಸಾರ್ವಜನಿಕವಾಗಿ ಬಾಲ್ಯವಿವಾಹವಾಗುವುದು ಸಾಧ್ಯವಿಲ್ಲ. ಹಾಗೆಯೇ ಸಾರ್ವಜನಿಕವಾಗಿ ಯಾರೂ ವರದಕ್ಷಿಣೆ ತೆಗೆದುಕೊಳ್ಳುವುದೂ ಸಾಧ್ಯವಿಲ್ಲ. ಇಂಥ ಕಾರ್ಯಕ್ರಮಗಳ ಮೂಲಕ ಅನಿಷ್ಟ ಪದ್ಧತಿಗಳನ್ನು ನಿಯಂತ್ರಿಸಬಹುದು’ ಎಂದು ಯೋಗಿ ಹೇಳಿದ್ದಾರೆ.

ADVERTISEMENT

2017ರ ಮೊದಲು ಅನೇಕ ಕಲ್ಯಾಣ ಯೋಜನೆಗಳು ಬಡವರನ್ನು, ಕಾರ್ಮಿಕರನ್ನು, ರೈತರನ್ನು ಹಾಗೂ ಯುವಕರನ್ನು ತಲುಪುತ್ತಿರಲಿಲ್ಲ. ಈಗ ಸರ್ಕಾರದ ಯೋಜನೆಗಳು ಬಡವರನ್ನು ತಲುಪುತ್ತಿವೆ’ ಎಂದು ಅವರು ಹೇಳಿದ್ದಾರೆ.

ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಉಲ್ಲೇಖಿಸಿದ ಅವರು, ಇದರಲ್ಲಿ ಜಾತಿ, ಮತ, ಧರ್ಮ, ಪ್ರದೇಶ ಅಥವಾ ಭಾಷೆಯ ತಾರತಮ್ಯವಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.