ADVERTISEMENT

ಉತ್ತರ ಪ್ರದೇಶ: ‘ದಪ‍್ಪಗಿದ್ದೀಯ’ ಎಂದು ಗೇಲಿ ಮಾಡಿದ್ದಕ್ಕೆ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 10 ಮೇ 2025, 14:26 IST
Last Updated 10 ಮೇ 2025, 14:26 IST
..
..   

ಲಖನೌ: ‘ದಪ‍್ಪಗಿದ್ದೀಯ’ ಎಂದು ಗೇಲಿ ಮಾಡಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಇಬ್ಬರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಅನಿಲ್‌ ಚೌಹಾಣ್‌ನನ್ನು ಬಂಧಿಸಲಾಗಿದೆ. ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಕೆಲ ದಿನಗಳ ಹಿಂದೆ ದೇವಾಲಯವೊಂದರಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅನಿಲ್ ಕುಮಾರ್‌ ಮತ್ತು ಶುಭಮ್ ಯಾದವ್‌ ಅವರು ಅನಿಲ್ ಚೌಹಾಣ್‌ ಅವರಿಗೆ ‘ನೀನು ದಪ್ಪಗಿದ್ದೀಯ’ ಎಂದು ಹೇಳಿದ್ದರು. ಇದರಿಂದ ಚೌಹಾಣ್‌ ಕೋಪಗೊಂಡಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಮೋಟಾರು ಬೈಕಿನಲ್ಲಿದ್ದ ಇಬ್ಬರನ್ನು ಆರೋಪಿಯು ಕಾರಿನಲ್ಲಿ ಬೆನ್ನಟ್ಟಿದ್ದು, ಸುಮಾರು 20 ಕಿ.ಮೀ. ಕ್ರಮಿಸಿದ ಬಳಿಕ ಅವರನ್ನು ತಡೆದು ಗುಂಡಿನ ದಾಳಿ ನಡೆಸಿದ್ದಾರೆ’ ಎಂದು  ಮೂಲಗಳು ಹೇಳಿವೆ.

‘ಅವರು ನನ್ನ ಬಗ್ಗೆ ಸಾರ್ವಜನಿಕವಾಗಿ ಗೇಲಿ ಮಾಡಿದ್ದರು. ಅವರ ಮಾತುಗಳಿಂದ ನನಗೆ ನೋವಾಗಿತ್ತು. ಬಳಿಕ ಅವರಿಗೆ ಪಾಠ ಕಲಿಸಲು ನಿರ್ಧರಿಸಿದ್ದೆ’ ಎಂದು ಚೌಹಾಣ್‌ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.