ADVERTISEMENT

ಕಲ್ಲಡ್ಕ ಪ್ರಭಾಕರ ಭಟ್ ದೈವಗಳ ಅಸ್ತಿತ್ವ ಪ್ರಶ್ನಿಸಿದ್ದಾರೆ : ಸಚಿವ ಬಿ.ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 6:21 IST
Last Updated 10 ಏಪ್ರಿಲ್ 2018, 6:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ‘ಕಲ್ಲಡ್ಕ ಪ್ರಭಾಕರ ಭಟ್ ಅವರು ಗೋಮಾಂಸ ಸೇವಿಸಿದವರಿಗೆ ಪ್ರಸಾದ ನೀಡುತ್ತಿರುವ ಭೂತ ಕಟ್ಟುವವರಿಗೆ ತಲೆ‌ ಸರಿ ಇಲ್ಲ ಎನ್ನುವ ಮೂಲಕ‌ ದೈವಾರಾಧನೆಯ ಅಸ್ತಿತ್ವವನ್ನೇ ಪ್ರಶ್ನಿಸಿದ್ದಾರೆ’ ಎಂದು ಸಚಿವ ಬಿ.ರಮಾನಾಥ ರೈ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭೂತ ಕಟ್ಟುವವನು ಕೊಡುವುದು ಪ್ರಸಾದ ಅಲ್ಲ. ದೈವ ಕೊಡುವುದು ಪ್ರಸಾದ. ಭೂತ ಕಟ್ಟುವ ವ್ಯಕ್ತಿ ನೆಪಮಾತ್ರ. ಆದರೆ, ಹಿಂದೂ ಧರ್ಮದ ನಾಯಕ‌ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರಭಾಕರ ಭಟ್ ಚುನಾವಣೆಯಲ್ಲಿ ಮತ‌ ಸೆಳೆಯಲು ಭೂತಾರಾಧನೆಯನ್ನು ಅವಮಾನಿಸಿದ್ದಾರೆ' ಎಂದರು.

‘ಭೂತಾರಾಧನೆ ಜನರ ನಂಬಿಕೆ. ಹಿಂದೂ ಧರ್ಮದ ನಾಯಕ ಎನಿಸಿಕೊಂಡವರು ಜನರ ನಂಬಿಕೆಯನ್ನೇ ಪ್ರಶ್ನಿಸಲು ಹೊರಟಿದ್ದಾರೆ. ಇವರು ಚುನಾವಣೆಗಾಗಿ ಮಾತ್ರ ಧರ್ಮ ರಕ್ಷಣೆಯ ಮಾತನಾಡುತ್ತಾರೆ, ಪ್ರಚೋದನಕಾರಿ ಭಾಷಣ ಮಾಡುತ್ತಾರೆ’ ಎಂಬುದು ಇದರಿಂದ ಸಾಬೀತಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.