ADVERTISEMENT

ಕೊಡಗಿನಲ್ಲಿ ಬಿಡುವು ಕೊಟ್ಟ ಮುಂಗಾರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 6:13 IST
Last Updated 15 ಜೂನ್ 2018, 6:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಕಳೆದ ಒಂದು ವಾರದಿಂದ ಆರ್ಭಟಿಸಿದ್ದ ಮುಂಗಾರು ಮಳೆ ಕೊಡಗಿನಲ್ಲಿ ಬಿಡುವು ನೀಡಿದೆ.

ಗುರುವಾರ ರಾತ್ರಿಯಿಂದ ಮಳೆ ಆಗುತ್ತಿಲ್ಲ. ಪ್ರವಾಹ ಸ್ಥಿತಿ ಇಳಿಮುಖವಾಗುತ್ತಿದ್ದು ಅಲ್ಲಲ್ಲಿ ರಸ್ತೆ ಸಂಚಾರ ಆರಂಭಗೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು ಮಡಿಕೇರಿ- ಭಾಗಮಂಡಲ- ತಲಕಾವೇರಿ ಹಾಗೂ ಭಾಗಮಂಡಲ- ಐಯ್ಯಂಗೇರಿ ರಸ್ತೆ ಸಂಚಾರ ಆರಂಭವಾಗಿದೆ. ಹಾರಂಗಿ ಒಳಹರಿವು ಕಡಿಮೆಯಾಗಿದೆ‌.

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಮತ್ತೆ ಹೆಚ್ಚಾಗಿದೆ. ಗುರುವಾರ 28 ಸಾವಿರ ಕ್ಯುಸೆಕ್ ಇದ್ದ ಒಳಹರಿವು, ಶುಕ್ರವಾರ 48,410 ಕ್ಯುಸೆಕ್‌ಗೆ ಹೆಚ್ಚಾಗಿದೆ. ಗುರುವಾರ ನೀರಿನ ಸಂಗ್ರಹ ಮಟ್ಟ 7.75 ಟಿಎಂಸಿ ಅಡಿ ಇತ್ತು. ಶುಕ್ರವಾರ 11.91 ಟಿಎಂಸಿ ಅಡಿಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ನಾಲ್ಕು ಟಿಎಂಸಿ ಅಡಿ ನೀರು ಅಣೆಕಟ್ಟೆಗೆ ಹರಿದು ಬಂದಿದೆ.

ADVERTISEMENT

ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ಇಂದಿನ ನೀರಿನ ಮಟ್ಟ(15 ಜೂನ್)

ಹಾರಂಗಿ ಜಲಾಶಯ(ಕೊಡಗು)
ಗರಿಷ್ಠ ಮಟ್ಟ: 2,859 ಅಡಿ (ಸಮುದ್ರ ಮಟ್ಟದಿಂದ)
ಇಂದಿನ ಮಟ್ಟ: 2,827.08ಅಡಿ
ಒಳಹರಿವು: 2,145

ತುಂಗಭದ್ರಾ ಜಲಾಶಯ(ಬಳ್ಳಾರಿ)
ಗರಿಷ್ಠ ಮಟ್ಟ: 1,633 ಅಡಿ
ಇಂದಿನ ಮಟ್ಟ: 1,592.57 (11.91 ಟಿ.ಎಂ.ಸಿ. ಅಡಿ)
ಒಳಹರಿವು: 48,410 ಕ್ಯುಸೆಕ್
ಹೊರಹರಿವು: 153 ಕ್ಯುಸೆಕ್

ಕೆಆರ್‌ಎಸ್‌ ಜಲಾಶಯ(ಮಂಡ್ಯ)
ಗರಿಷ್ಠ ಮಟ್ಟ: 124.80 ಅಡಿ (ನೆಲಮಟ್ಟದಿಂದ)
ಇಂದಿನ ಮಟ್ಟ: 94.50 ಅಡಿ
ಒಳಹರಿವು: 28,096 ಕ್ಯುಸೆಕ್
ಹೊರಹರಿವು: 529 ಕ್ಯುಸೆಕ್

ಹೇಮಾವತಿ ಜಲಾಶಯ(ಹಾಸನ)
ಗರಿಷ್ಠ. ಮಟ್ಟ : 2922 ಅಡಿ
ಇಂದಿನ ಮಟ್ಟ: 2897.16 ಅಡಿ
ಒಳಹರಿವು: 19242 ಕ್ಯುಸೆಕ್
ಹೊರಹರಿವು: 200 ಕ್ಯುಸೆಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.