ADVERTISEMENT

ಪಶ್ಚಿಮವಾಹಿನಿಯಲ್ಲಿ ಅನಂತಕುಮಾರ್‌ ಅಸ್ಥಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:35 IST
Last Updated 14 ನವೆಂಬರ್ 2018, 19:35 IST
ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ, ಕಾವೇರಿ ನದಿಯಲ್ಲಿ ಅನಂತಕುಮಾರ್‌ ಅಸ್ಥಿ ವಿಸರ್ಜಿಸಲಾಯಿತು
ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ, ಕಾವೇರಿ ನದಿಯಲ್ಲಿ ಅನಂತಕುಮಾರ್‌ ಅಸ್ಥಿ ವಿಸರ್ಜಿಸಲಾಯಿತು   

ಶ್ರೀರಂಗಪಟ್ಟಣ: ಕೇಂದ್ರ ಸಚಿವ ಅನಂತಕುಮಾರ್‌ ಅಸ್ಥಿಯನ್ನು ಪಟ್ಟಣದ ಪಶ್ಚಿಮವಾಹಿನಿ ಬಳಿ, ಕಾವೇರಿ ನದಿಯಲ್ಲಿ ಬುಧವಾರ ವಿಸರ್ಜಿಸಲಾಯಿತು.

ಅನಂತಕುಮಾರ್ ಸಹೋದರ ನಂದಕುಮಾರ್‌ ಬ್ರಾಹ್ಮಣ ಸಂಪ್ರದಾಯದ ವಿಧಿ, ವಿಧಾನದಂತೆ ಅಸ್ಥಿ ವಿಸರ್ಜಿಸಿದರು. ಬೆಂಗಳೂರಿನಿಂದ ತಂದ ಅಸ್ಥಿ ತುಂಬಿದ್ದ ಕುಡಿಕೆಯನ್ನು ನದಿಯ ದಡದಲ್ಲಿಟ್ಟು ಸಂಸ್ಕಾರ ಮಾಡಲಾಯಿತು. ಗೋಮಯ, ತುಪ್ಪ, ಮೊಸರು, ಹಾಲು, ಎಳನೀರುಗಳಿಂದ ಅಸ್ಥಿ ಕುಡಿಕೆಗೆ ಸಂಸ್ಕಾರ ಮಾಡಲಾಯಿತು. ಪೂಜೆ ಸಲ್ಲಿಸಿದ ಬಳಿಕ ನದಿಯಲ್ಲಿ ವಿಸರ್ಜಿಸಲಾಯಿತು. ‘ಅನಂತಕುಮಾರ್‌ ಅಮರ್‌ ರಹೇ....’ ಘೋಷಣೆಗಳು ಮೊಳಗಿದವು.

ಸಂಸದರಾದ ಪ್ರಹ್ಲಾದ ಜೋಶಿ, ಪ್ರತಾಪ ಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಉದಯ ಗರುಡಾಚಾರ್‌, ಎಲ್‌.ನಾಗೇಂದ್ರ, ಬಿಜೆಪಿ ಮುಖಂಡರಾದ ಕೆ.ಬಲರಾಂ, ಕೆ.ಎಸ್‌.ನಂಜುಂಡೇಗೌಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.