ADVERTISEMENT

ಎಲ್ಲ ಲಿಂಗಾಯತರಿಗೆ 2ಎ ಮೀಸಲಾತಿಯ ಚಿಂತನೆ: ಸಚಿವ ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 19:59 IST
Last Updated 27 ಫೆಬ್ರುವರಿ 2021, 19:59 IST
ಸಚಿವ ಮುರುಗೇಶ ನಿರಾಣಿ
ಸಚಿವ ಮುರುಗೇಶ ನಿರಾಣಿ    

ಕೊಪ್ಪಳ: ‘ಮೀಸಲಾತಿ ಸೇರಿದಂತೆ ವಿವಿಧಬೇಡಿಕೆ ಈಡೇರಿಕೆಗೆ ಪಂಚಮಸಾಲಿ, ವಾಲ್ಮೀಕಿ, ಕುರುಬ ಜನಾಂಗದ
ವರು ಹೋರಾಟ ನಡೆಸುತ್ತಿದ್ದಾರೆ. ಲಿಂಗಾಯತ ಎಲ್ಲ ಜಾತಿಗಳನ್ನು 2ಎಗೆ ಸೇರಿಸುವ ಚಿಂತನೆ ಇದೆ. ಹಿಂದುಳಿದ ವರ್ಗದ ಆಯೋಗದಿಂದ ವರದಿ ಪಡೆದು ಸಂಪುಟದಲ್ಲಿ ಚರ್ಚೆ ನಡೆಸಿ ಮೀಸಲಾತಿ ನೀಡಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಶನಿವಾರ ಹೇಳಿದರು.

‘ವಿಜಯಾನಂದ ಕಾಶಪ್ಪನವರು ರಾಷ್ಟ್ರೀಯ ಮಟ್ಟದ ನಾಯಕರು. ಅವರಷ್ಟು ದೊಡ್ಡ ನಾಯಕರು ನಾವಲ್ಲ. ಮೀಸಲಾತಿಗೆ ನಾವು ಮುಂದಾಳತ್ವ ವಹಿಸುವುದಿಲ್ಲ. ಅದನ್ನು ಅವರಿಗೆ ಬಿಟ್ಟಿದ್ದೇವೆ. ದೇವರು ಅವರಿಗೆ ಎಷ್ಟು ಶಕ್ತಿ, ಸಾಮರ್ಥ್ಯ ನೀಡಿದ್ದಾನೆಯೋ ಅಷ್ಟು ಹೋರಾಟ ಮಾಡಲಿ. ಸರ್ಕಾರದ ಭಾಗವಾಗಿ ಕೇವಲ ಪಂಚಮಸಾಲಿ ಸಮಾಜಕ್ಕಲ್ಲ,ಒಟ್ಟಾರೆ ವೀರಶೈವ-ಲಿಂಗಾಯತ ಸಮಾಜಕ್ಕೆ ಏನು ‌ಮಾಡಬೇಕೋ ಅದನ್ನು ಮಾಡಲಿದ್ದೇವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT