ADVERTISEMENT

ರಾಯಚೂರು ನಗರ ಕ್ಷೇತ್ರ: 41 ಸಾವಿರ ಮತದಾರರು ಕಡಿತ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 13:00 IST
Last Updated 28 ನವೆಂಬರ್ 2022, 13:00 IST
ಡಾ.ರಜಾಕ್‌ ಉಸ್ತಾದ್‌
ಡಾ.ರಜಾಕ್‌ ಉಸ್ತಾದ್‌   

ರಾಯಚೂರು: ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ 41 ಸಾವಿರ ಹೆಸರುಗಳನ್ನು ಕಡಿತಗೊಳಿಸಿರುವುದು ಸಂಶಯಕ್ಕೀಡು ಮಾಡಿದ್ದು, ಈ ಕುರಿತು ಕೂಡಲೇ ತನಿಖೆ ನಡೆಸಬೇಕು ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್‌ ಉಸ್ತಾದ್‌ ಒತ್ತಾಯಿಸಿದ್ದಾರೆ.

2022 ರಲ್ಲಿ 2.38 ಲಕ್ಷ ಮತದಾರರಿದ್ದರು. ಈ ವರ್ಷ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 2.13 ಮತದಾರರಿದ್ದು, ಅದರಲ್ಲಿ 16 ಸಾವಿರ ಹೊಸದಾಗಿ ಸೇರ್ಪಡೆಯಾದ ಮತದಾರರಿದ್ದಾರೆ. 2020 ರಲ್ಲಿಯೂ ಒಟ್ಟು ಮತದಾರರು 2.36 ಲಕ್ಷ ಮತದಾರರು ಇದ್ದರು.

ಕರುಡು ಮತದಾರರ ಪಟ್ಟಿಯಲ್ಲಿ ಸಾಕಷ್ಟು ಲೋಕಪದೋಷಗಳಿವೆ. ಹೆಸರು, ತಂದೆಯ ಹೆಸರು, ವಿಳಾಸ ಅಳಿಸಿ ಹಾಕಿದ ಮತದಾರರ ಪಟ್ಟಿ ಇದೆ. ಈ ರೀತಿಯ ಗೊಂದಲಗಳನ್ನು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಲಾಗಿದೆ. ಕೆಲವೆಡೆ ಮತದಾರರನ್ನು ದೂರದ ಮತಗಟ್ಟೆಗೆ ವರ್ಗಾಯಿಸಲಾಗಿದೆ. ಮತದಾರರಿಗೆ ಗೊಂದಲವಾಗಿ ಮತದಾನ ಮಾಡದಂತೆ ತಡೆಯುವುದಕ್ಕೆ ಈ ಸಂಚು ರೂಪಿಸಲಾಗಿದೆ. ಒಟ್ಟಾರೆ ಆಡಳಿತ ನಡೆಸುವ ಸರ್ಕಾರಕ್ಕೆ ಅನುಕೂಲ ಮಾಡುವ ಉದ್ದೇಶದಿಂದ ಇದನ್ನೆಲ್ಲ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.