ADVERTISEMENT

ಬೆಂಗಳೂರಿನ ಮದ್ಯದಂಗಡಿ ಎದುರು ಕ್ಯೂ ನಿಂತಿದ್ದ ಯುವತಿ ಅಸ್ವಸ್ಥ

ಬೆಳಗ್ಗೆಯಿಂದ ಉಪವಾಸವಿದ್ದು ಸಾಲಿನಲ್ಲಿ ನಿಂತಿದ್ದ ಯುವತಿ

​ಪ್ರಜಾವಾಣಿ ವಾರ್ತೆ
Published 4 ಮೇ 2020, 7:58 IST
Last Updated 4 ಮೇ 2020, 7:58 IST
ಬೆಂಗಳೂರಿನ ಮದ್ಯದಂಗಡಿ ಎದುರು ಸಾಲಿನಲ್ಲಿ ನಿಂತಿದ್ದಾಗ ಅಸ್ವಸ್ಥಗೊಂಡ ಯುವತಿ
ಬೆಂಗಳೂರಿನ ಮದ್ಯದಂಗಡಿ ಎದುರು ಸಾಲಿನಲ್ಲಿ ನಿಂತಿದ್ದಾಗ ಅಸ್ವಸ್ಥಗೊಂಡ ಯುವತಿ   

ಬೆಂಗಳೂರು: ನಗರದ ಕಸ್ತೂರಬಾ ರಸ್ತೆಯ ವೃತ್ತದಲ್ಲಿರುವ ಟಾನಿಕ್ ಮದ್ಯದಂಗಡಿ ಎದುರು ಮದ್ಯ ಖರೀದಿಗೆ ಸರದಿಯಲ್ಲಿ ನಿಂತಿದ್ದ ಯುವತಿಯೊಬ್ಬರು ಅಸ್ವಸ್ಥಗೊಂಡು ತಲೆ ತಿರುಗಿ ಬಿದ್ದಿದ್ದಾರೆ.

ಬೆಳಿಗ್ಗೆಯಿಂದಲೇ ಹೊಟ್ಟೆಗೆ ಏನು ತಿನ್ನದೇ ಸರದಿಯಲ್ಲಿ ಸರತಿ ನಿಂತಿದ್ದರಿಂದ ಯುವತಿಗೆ ತಲೆ ಸುತ್ತು ಬಂದಿತ್ತು. ಮದ್ಯದಂಗಡಿ ಸಿಬ್ಬಂದಿಯೇ ಆಕೆಗೆ ನೀರು ಕುಡಿಸಿ ಉಪಚರಿಸಿದರು.

ಬಿಸಿಲಿನ ನಡುವೆಯೇ ಮದ್ಯದ ಅಂಗಡಿ‌ ಮುಂದೆ ಜನ ನಿಂತಿದ್ದಾರೆ. ಯುವತಿಯರು ಕೂಡ ಮದ್ಯ ಖರೀದಿಗೆ ಸರದಿಯಲ್ಲಿ ನಿಂತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.