ADVERTISEMENT

ಕರ್ನಾಟಕ ಬಂದ್: ನಟ ಶಿವರಾಜಕುಮಾರ್ ಅಸಮಾಧಾನ?

ಮೈಸೂರು ‘ಡಿಆರ್‌ಸಿ’ಯಲ್ಲಿ ‘ಬಡವ ರಾಸ್ಕಲ್’ ವೀಕ್ಷಿಸಿದ ಶಿವರಾಜಕುಮಾರ್ : ಡಿ.31 ಕರ್ನಾಟಕ ಬಂದ್ ಕುರಿತು ಮಾತು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 6:24 IST
Last Updated 25 ಡಿಸೆಂಬರ್ 2021, 6:24 IST
ನಟ ಶಿವರಾಜಕುಮಾರ್ ತಿಳಿಸಿದರು.
ನಟ ಶಿವರಾಜಕುಮಾರ್ ತಿಳಿಸಿದರು.   

ಮೈಸೂರು: ‘ಡಿ. 31ರಂದು ಕನ್ನಡದ 3 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅಂದೇ ಬಂದ್‌ಗೆ ಕರೆ ನೀಡಲಾಗಿದೆ. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಗೆದುಕೊಳ್ಳುವ ತೀರ್ಮಾನದಂತೆ ನಾವೆಲ್ಲರೂ ನಡೆಯುತ್ತೇವೆ’ ಎಂದು ನಟ ಶಿವರಾಜಕುಮಾರ್ ಪರೋಕ್ಷವಾಗಿ ಉದ್ದೇಶಿತ ಕರ್ನಾಟಕ ಬಂದ್‌ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಇಲ್ಲಿ ಡಿಆರ್‌ಸಿ ಚಿತ್ರಮಂದಿರದಲ್ಲಿ ‘ಡಾಲಿ’ ಧನಂಜಯ ಅಭಿನಯದ ‘ಬಡವ ರಾಸ್ಕಲ್’ ಸಿನಿಮಾ ವೀಕ್ಷಿಸಿದ ಬಳಿಕ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನಾಡು, ನುಡಿಗೆ ಅಪಮಾನ ಮಾಡಿರುವ ಕೃತ್ಯವನ್ನು ಸರ್ಕಾರವೂ ಗಂಭೀರವಾಗಿ ಪರಿಗಣಿಸಿದೆ. ನಾಡು-ನುಡಿಯ ಬಗ್ಗೆ ಎಲ್ಲರಲ್ಲೂ ಪ್ರೀತಿ ಇದ್ದೇ ಇರುತ್ತದೆ. ಆದರೆ, ನಮ್ಮಿಂದಲೇ ದ್ರೋಹವಾಗುವ ಸನ್ನಿವೇಶ ಸೃಷ್ಟಿಯಾಗಬಾರದು’ ಎಂದು ಹೇಳಿದರು.

ADVERTISEMENT

ಎಲ್ಲವೂ ಒಳ್ಳೆಯ ರೀತಿಯಲ್ಲಿ ಆಗಬೇಕು. ಬುದ್ಧಿವಂತಿಕೆಯಿಂದ ಪರಿಸ್ಥಿತಿ ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಎಲ್ಲರ ಮೇಲೆ ಜವಾಬ್ದಾರಿ ಇದೆ ಎಂದು ತಿಳಿಸಿದರು.

‘ನನ್ನ ಅಭಿಯನದ ‘ಭೈರಾಗಿ’ ಚಿತ್ರ ಬಹುತೇಕ ಮುಗಿದಿದ್ದು, ಮಾರ್ಚ್ ಅಥವಾ ಏಪ್ರಿಲ್‌ಗೆ ತೆರೆ ಕಾಣಲಿದೆ’ ಎಂದು ಹೇಳಿದರು.

‘ಬಡವ ರಾಸ್ಕಲ್’ ಚಿತ್ರದಲ್ಲಿ ಸರಳ ಕತೆಯನ್ನು ತುಂಬಾ ಮನರಂಜನಾತ್ಮಕವಾಗಿ ಪ್ರಸ್ತುತಪಡಿಸಲಾಗಿದೆ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.