ADVERTISEMENT

ಈಶ್ವರಪ್ಪ ಭೇಟಿಗೆ ಅಮಿತ್‌ ಶಾ ನಕಾರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 19:13 IST
Last Updated 3 ಏಪ್ರಿಲ್ 2024, 19:13 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ನವದೆಹಲಿ: ‘ದೆಹಲಿಗೆ ಬಂದ ಬಳಿಕ ಅಮಿತ್ ಶಾ ಕಚೇರಿಯಿಂದ ಕರೆ ಬಂದಿದ್ದು, ಬುಧವಾರ ಗೃಹ ಸಚಿವರು ಸಿಗುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣೆಗೆ ನಿಂತು ಯಡಿಯೂರಪ್ಪ ಮಗನನ್ನು ಸೋಲಿಸಲಿ ಎಂಬುದು ಶಾ ಅವರ ಅಪೇಕ್ಷೆ ಇರಬೇಕು’ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಅಮಿತ್ ಶಾ ಸೂಚನೆ ಮೇರೆಗೆ ಬುಧವಾರ ಸಂಜೆ ಅವರು ದೆಹಲಿಗೆ ತಲುಪಿದ್ದರು. ರಾತ್ರಿ 10ಗಂಟೆ ಬಳಿಕ, ಸಮಯ ನಿಗದಿಯಾಗಿತ್ತು ಎಂದು ಮೂಲಗಳು ಹೇಳಿದ್ದವು.

ಭೇಟಿ ರದ್ದಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ’ಅಮಿತ್ ಶಾ ಅವರಿಗೆ ಗೌರವ ಕೊಟ್ಟು ಬಂದಿದ್ದೇನೆ. ಸಿಗುವುದಿಲ್ಲ ಎಂಬ ಮಾಹಿತಿ ಬಂತು. ನಾನು ಚುನಾವಣೆಗೆ ನಿಲ್ಲಲಿ, ರಾಘವೇಂದ್ರ ಸೋಲಲಿ ಎಂಬ ಕಾರಣಕ್ಕಾಗಿಯೇ ‘ಸಿಗುವುದಿಲ್ಲ’ ಎಂದು ಅಮಿತ್ ಶಾ ಹೇಳಿರಬೇಕು. ಮುಂದಿನ ದಿನಗಳಲ್ಲಿ ಮಾತುಕತೆಗೆ ಮುಂದಾಗುವುದಿಲ್ಲ. ಶಿವಮೊಗ್ಗದಿಂದ ಸ್ಪರ್ಧಿಸಿ ಗೆದ್ದು ಮೋದಿ–ಶಾ ಕೈ ಬಲಪಡಿಸುತ್ತೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.