ವಿಧಾನಸೌಧ
ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಹಾಗೂ ಏಳು ಮಂದಿ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಎಂ. ಪ್ರಸಾದ್, ಆಯುಕ್ತರಾಗಿ ಕೆ. ರಾಮನ್, ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ. ಚನ್ನಲ್, ಎಸ್. ರಾಜಶೇಖರ್, ಕೆ. ಬದ್ರುದ್ದೀನ್, ಬಿ.ಆರ್. ಮಮತಾ ನೇಮಕಗೊಂಡಿದ್ದಾರೆ.
ಮುಖ್ಯ ಆಯುಕ್ತ, ಮಾಹಿತಿ ಆಯುಕ್ತರ ಏಳು ಹುದ್ದೆಗಳಿಗೆ 500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದ್ದ ಕಾರಣ ವರ್ಷದ ಹಿಂದೆಯೇ ಆರಂಭವಾಗಿದ್ದ ಆಯ್ಕೆ ಪ್ರಕ್ರಿಯೆ ವಿಳಂಬವಾಗಿತ್ತು. ಮಾಹಿತಿ ಆಯುಕ್ತರ ಅವಧಿ ಮೂರು ವರ್ಷ ಅಥವಾ ನೇಮಕವಾದವರ ವಯಸ್ಸು 65 ಆಗುವವರಿಗೆ ಇರುತ್ತದೆ. ಎರಡರಲ್ಲಿ ಯಾವುದು ಮೊದಲೋ ಆಗ ಅವರ ಅಧಿಕಾರಾವಧಿ ಮುಗಿಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.