ಬೆಂಗಳೂರು: ‘ವಿ.ವಿಗಳಲ್ಲಿ ನೇಮಕಾತಿಗಳಿಗೆ ಹಣ ಕೊಡಬೇಕಾಗಿದೆ’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹಿಂದೆ ಮಾಡಿದ್ದ ಆರೋಪ ವಿಧಾನಸಭೆಯಲ್ಲಿ ಪ್ರಸ್ತಾಪಗೊಂಡು, ಬಿಜೆಪಿಯ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ನಡೆಯಿತು.
ಮಾತು ವೈಯಕ್ತಿಕ ಟೀಕೆಗೆ ತಿರುಗಿತು. ‘ಹಿಂದಿನ ಸರ್ಕಾರ ಶೇ 40 ಕಮಿಷನ್ ಸರ್ಕಾರ’ ಎಂಬ ಪ್ರಿಯಾಂಕ್ ಆರೋಪಕ್ಕೆ, ‘ನಿಮ್ಮದು ಶೇ 100 ಕಮಿಷನ್ ಸರ್ಕಾರ’ ಎಂದು ಅಶ್ವತ್ಥನಾರಾಯಣ ತಿರುಗೇಟು ನೀಡಿ
ದರು. ಮಧ್ಯಪ್ರವೇಶಿಸಿದ ಸಚಿವ ಎಂ.ಸಿ.ಸುಧಾಕರ್, ‘ನಿಮ್ಮ ಅವಧಿ ಯಲ್ಲಿ ಶಿಕ್ಷಣದ ಖಾಸಗೀಕರಣಕ್ಕೆ ಹೋಗಿದ್ದೀರಿ’ ಎಂದು ಟೀಕಿಸಿದರು. ಅದಕ್ಕೆ ಅಶ್ವತ್ಥನಾರಾಯಣ, ‘ನಿಮ್ಮ ಮಗನನ್ನು ಸರ್ಕಾರಿ ಕಾಲೇಜಿನಲ್ಲಿ ಓದಿಸುತ್ತಿದ್ದೀರಾ? ನೈತಿಕತೆ ಇಲ್ಲವೇ ’ ಎಂದು ಪ್ರಶ್ನಿಸಿದರು.
ಅಶ್ವತ್ಥನಾರಾಯಣ ಅವರು ರಾತ್ರಿ ಬಜೆಟ್ ಮೇಲೆ ಮಾತನಾಡುವಾಗ ಸಚಿವ ಪ್ರಿಯಾಂಕ್ ಅಡ್ಡಿಪಡಿಸಿದರೆಂದು, ‘ಪದೇ ಪದೇ ನಿಲ್ಲುತ್ತಿರಲ್ಲ ಪೈಲ್ಸ್ ಆಗಿದೆಯೆ’ ಎಂದು ಹೇಳಿದ್ದು, ವಾಕ್ಸಮರಕ್ಕೆ ಕಾರಣವಾಯಿತು.
ಅಶ್ವತ್ಥನಾರಾಯಣ ಬಳಸಿದ ಪದದ ಬಗ್ಗೆ ಸಚಿವ ದಿನೇಶ ಮತ್ತು ಇತರರು ಆಕ್ಷೇಪಿಸಿ, ಕ್ಷಮೆಗೆ ಆಗ್ರಹಿಸಿದರು. ಮೊದಲು ‘ಪದ ಹಿಂಪಡೆದಿದ್ದೇನೆ’ ಎಂದ ಅಶ್ವತ್ಥನಾರಾಯಣ, ನಂತರ ‘ಪ್ರಿಯಾಂಕ್ ಅವರಲ್ಲಿ ಕ್ಷಮೆ ಕೇಳುತ್ತೇನೆ’ ಎಂದರು.
‘ನಿಮ್ಮ ಕುಟುಂಬದ ಭ್ರಷ್ಟಾಚಾರ ಇಡೀ ದೇಶಕ್ಕೆ ಗೊತ್ತಿದೆ. ಬರೀ ಅಪ್ಪ–ಮಕ್ಕಳ ಪಕ್ಷವಾಗಿದೆ’ಅಶ್ವತ್ಥನಾರಾಯಣ, ಬಿಜೆಪಿ ಶಾಸಕ
ಬಿಜೆಪಿಯವರಿಗೆ ನನ್ನ ಬಗ್ಗೆ ಅಸಹನೆ ಏಕೆ? ನನ್ನನ್ನು ಕಾನ್ವೆಂಟ್ ದಲಿತ ಎನ್ನುತ್ತಾರೆ. ಸರ್ಕಾರಿ ದಲಿತ ಎನ್ನುತ್ತಾರೆ. ನೀವೆಲ್ಲ ಮನುಸ್ಮೃತಿಯವರುಪ್ರಿಯಾಂಕ್ ಖರ್ಗೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.