ADVERTISEMENT

ಮಹೇಶ ಕುಮಠಳ್ಳಿಗೆ ಸ್ವಗ್ರಾಮದಲ್ಲೇ ವಿರೋಧ!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:17 IST
Last Updated 1 ಡಿಸೆಂಬರ್ 2019, 11:17 IST
ಅಥಣಿ ವಿಧಾನಸಭಾ ಕ್ಷೇತ್ರದ ತೆಲಸಂಗ ಗ್ರಾಮದಲ್ಲಿ ಇಟ್ಟಿದ್ದ ಬೋರ್ಡ್‌
ಅಥಣಿ ವಿಧಾನಸಭಾ ಕ್ಷೇತ್ರದ ತೆಲಸಂಗ ಗ್ರಾಮದಲ್ಲಿ ಇಟ್ಟಿದ್ದ ಬೋರ್ಡ್‌   

ತೆಲಸಂಗ (ಅಥಣಿ ತಾಲ್ಲೂಕು): ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಮತ ಯಾಚಿಸುವುದಕ್ಕೆ ಅವರ ಸ್ವಗ್ರಾಮ ತೆಲಸಂಗದಲ್ಲೇ ವಿರೋಧ ವ್ಯಕ್ತವಾಗಿದೆ.

ವಿರೋಧ ವ್ಯಕ್ತಪಡಿಸಿ ಶುಕ್ರವಾರ ಗ್ರಾಮದ ಅಲ್ಲಲ್ಲಿ ಫಲಕಗಳನ್ನು ಹಾಕ ಲಾಗಿತ್ತು. ‘ಅಥಣಿ, ಶಿವಯೋಗಿಗಳ ಪುಣ್ಯಕ್ಷೇತ್ರ. ಹಣಕ್ಕಾಗಿ ತಮ್ಮ ಶಾಸಕರ ಸ್ಥಾನವನ್ನೇ ಮಾರಾಟ ಮಾಡಿಕೊಂಡ ಅನರ್ಹರಿಗೆ ಇಲ್ಲಿ ಪ್ರವೇಶವಿಲ್ಲ’ ಎಂದು ದೊಡ್ಡ ಫಲಕ ಇಡಲಾಗಿತ್ತು.

‘ಪಕ್ಷಾಂತರ ಮಾಡಿದ ಅನರ್ಹ ಶಾಸಕರನ್ನು ತಮಿಳುನಾಡು, ಮಹಾರಾಷ್ಟ್ರ, ಗುಜರಾತಿನ ಜನ ಸೋಲಿಸಿದ್ದಾರೆ. ಕರ್ನಾಟಕದಲ್ಲೂ ಒಬ್ಬನೇ ಒಬ್ಬ ಅನರ್ಹ ಶಾಸಕ ಗೆದ್ದರೂ ಆ ಕ್ಷೇತ್ರದ ಮತದಾರ ತನ್ನನ್ನು ತಾನು ಹಣ, ಹೆಂಡಕ್ಕೆ ಅಡವಿಟ್ಟುಕೊಂಡಂತೆ’ ಎಂಬ ಹೇಳಿಕೆಗೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಹೆಸರು ಹಾಗೂ ಫೋಟೊ ಇರುವ ಫ್ಲೆಕ್ಸ್‌ ಕೂಡ ಇಡಲಾಗಿತ್ತು. ಯಾರು ಇಟ್ಟರು ಎನ್ನುವುದು ತಿಳಿದುಬಂದಿಲ್ಲ.

ADVERTISEMENT

ಪಿಡಿಒ ಬೀರಪ್ಪ ಕಡಗಂಚಿ ಫಲಕ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಐಗಳಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.