ADVERTISEMENT

ಕಲಾವಿದೆ ಬಿ.ಜಯಶ್ರೀಗೆ ಅಪಮಾನ: ಅಧಿಕಾರಿ ಅಮಾನತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 15:46 IST
Last Updated 2 ಫೆಬ್ರುವರಿ 2026, 15:46 IST
<div class="paragraphs"><p>ಆರ್.ಅಶೋಕ</p></div>

ಆರ್.ಅಶೋಕ

   

ಬೆಂಗಳೂರು: ಕಲಾವಿದೆ ಬಿ.ಜಯಶ್ರೀ ಅವರು ರಂಗಚಟುವಟಿಕೆಗಳಿಗಾಗಿ ಐದು ಗುಂಟೆ ಜಮೀನು ದಾನ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಮೂರು ಬಾರಿ ಅರ್ಜಿ ನೀಡಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ದೂರಿದರು.‌

‘ಸರ್ವೆ ಕಚೇರಿಗೆ ಹೋಗಿ ವಿಚಾರಿಸಿದಾಗ ನಿಮ್ಮ ಕೆಲಸಕ್ಕಿಂತ ನಮ್ಮ ಮೇಲಧಿಕಾರಿಯ ಕೆಲಸ ಮುಖ್ಯ ಎನ್ನುತ್ತಾರೆ. ಅಧಿಕಾರಿ ಉಡಾಫೆಯಿಂದ ಮಾತಾಡುತ್ತಾರೆ’ ಎಂದು ಜಯಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ. ವಿಷಯ ಪತ್ರಿಕೆಗಳಲ್ಲೂ ಪ್ರಕಟವಾಗಿದೆ. ದಾನ ಮಾಡುವ ಭೂಮಿಗೆ ಲಂಚ ನಿರೀಕ್ಷೆ ಮಾಡುತ್ತಾರೆ. ಅವರನ್ನು ಅಲೆಸುತ್ತಿದ್ದಾರೆ. ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಮನೆ ಬಾಗಿಲಿಗೆ ಸರ್ಕಾರ’ ಎಂದು ಪ್ರಚಾರ ಮಾಡುತ್ತಾರೆ. ರಾಜ್ಯಸಭಾ ಮಾಜಿ ಸದಸ್ಯೆಯನ್ನೇ ಕಚೇರಿಗೆ ಅಲೆದಾಡಿಸುತ್ತಾರೆ. ಇನ್ನು ಜನಸಾಮಾನ್ಯರ ಸ್ಥಿತಿ ಹೇಗಿದೆ ಎಂದು ಊಹಿಸಲೂ ಆಗದು. ಇಂತಹ ಕಳ್ಳ ಅಧಿಕಾರಿಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.