ADVERTISEMENT

Video Story: ಗ್ಯಾರಂಟಿ ಯೋಜನೆಗಳಿಗೆ ಹುಡುಕಾಡುವಾಗ ನಕಲಿ ಆ್ಯಪ್‌ಗಳ ಬಗ್ಗೆ ಇರಲಿ ಎಚ್ಚರ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅರ್ಜಿ ಸಲ್ಲಿಸುವಾ ಇರಲಿ ಎಚ್ಚರ

ಪ್ರಜಾವಾಣಿ ವಿಶೇಷ
Published 3 ಜುಲೈ 2023, 14:57 IST
Last Updated 3 ಜುಲೈ 2023, 14:57 IST

ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ನೋಂದಣಿ ಮಾಡುವಾಗ ನಕಲಿ ಲಿಂಕ್ ಹಾಗೂ ಆ್ಯಪ್‌ಗಳ ಬಗ್ಗೆ ಎಚ್ಚರವಹಿಸಿ ಎಂದು ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸೈಬರ್‌ ಖದೀಮರು ಹಲವು ನಕಲಿ ಆ್ಯಪ್‌ ಹಾಗೂ ಲಿಂಕ್‌ಗಳನ್ನು ಹರಿಯಬಿಟ್ಟಿದ್ದು, ಅವುಗಳ ಮೂಲಕ ಸಾರ್ವಜನಿಕರ ದತ್ತಾಂಶ ಕದಿಯಲು ಮುಂದಾಗಿದ್ದಾರೆ ಎನ್ನುವ ವರದಿಗಳು ಬರುತ್ತಿರುವ ಬೆನ್ನಲ್ಲೇ, ಪೊಲೀಸರಿಂದ ಇಂತಹದ್ದೊಂದು ಎಚ್ಚರಿಕೆಯ ಸಂದೇಶ ಬಂದಿದೆ. ‘‌ಗ್ಯಾರಂಟಿ ಯೋಜನೆಗಳ ನೋಂದಣಿಗೆ ಸರ್ಕಾರ ಯಾವುದೇ ಆ್ಯಪ್ ಅನ್ನು ಪರಿಚಯಿಸಿಲ್ಲ. ಆದರೆ ಹಲವು ನಕಲಿ ಆ್ಯಪ್‌ಗಳು ಡೌನ್‌ಲೋಡ್‌ ಮಾಡಿಕೊಳ್ಳಲು ಲಭ್ಯವಿದೆ. ಫಲಾನುಭವಿಗಳು ಇದರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಆ್ಯಪ್‌ಗಳನ್ನು ರಿಪೋರ್ಟ್‌ ಮಾಡಬೇಕು. ಈ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ‘ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಸ್‌.ಡಿ ಶರಣಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.