ಶಿವಕುಮಾರ
ಬೀದರ್: ‘ನನಗೆ ಪುನರ್ಜನ್ಮ ಸಿಕ್ಕಿದೆ’ - ನಗರದ ಎಸ್‌ಬಿಐ ಕಚೇರಿ ಎದುರು ಜ. 16ರಂದು ದರೋಡೆಕೋರರ ಗುಂಡೇಟಿಗೆ ಗಾಯಗೊಂಡು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಶಿವಕುಮಾರ ಅವರ ಪ್ರತಿಕ್ರಿಯೆ ಇದು.
‘ಟ್ರಂಕ್ ತಗೊಂಡ್ ಬಂದಿದ್ದೆವು. ಬಂದು ಡೈರೆಕ್ಟ್ ಅಟ್ಯಾಕ್ ಮಾಡಿದ್ದಾರೆ. ನಮ್ಮ ಬಳಿ ಗನ್‌ಮ್ಯಾನ್, ಡ್ರೈವರ್ ಇರಲಿಲ್ಲ. ನನ್ನ ಜೊತೆಗಿದ್ದ ಗಿರಿ ವೆಂಕಟೇಶ ಅವರ ಕಣ್ಣಿಗೆ ಕಾರ ಎರಚಿ, ದಾಳಿ ನಡೆಸಿದ್ದಾರೆ. ನನ್ನ ಮೇಲೆ ಕೂಡ ಎರಡ್ಮೂರು ಸಲ ಗುಂಡು ಹಾರಿಸಲು ಪ್ರಯತ್ನಿಸಿದ್ದಾರೆ. ಅಷ್ಟೂ ಸಲ ನಾನು ತಪ್ಪಿಸಿಕೊಂಡೆ. ಗನ್‌ಮ್ಯಾನ್ ಎಂದು ಚೀರಾಡುತ್ತಿದ್ದಾಗ ಒಂದು ಗುಂಡು ಎದೆಗೆ ಹಾರಿಸಿದ್ದಾರೆ. ಅವರು ಸತತವಾಗಿ ಗುಂಡು ಹಾರಿಸುತ್ತಿದ್ದರು’ ಎಂದು ಘಟನೆಯ ಕುರಿತು ವಿವರಿಸಿದ ವಿಡಿಯೋ ಸಂದೇಶವನ್ನು ಶಿವಕುಮಾರ ಅವರ ಭಾಮೈದ ಶಿವಯೋಗಿ ಅವರು ಮಾಧ್ಯಮಗಳಿಗೆ ಬುಧವಾರ ಬಿಡುಗಡೆಗೊಳಿಸಿದ್ದಾರೆ.
ಜ. 16ರಂದು ನಗರದ ಎಸ್‌ಬಿಐ ಎದುರು ದರೋಡೆಕೋರರಿಬ್ಬರೂ ಗುಂಡಿನ ದಾಳಿ ನಡೆಸಿ ₹83 ಲಕ್ಷ ನೋಟಿನ ಕಂತೆಗಳಿರುವ ಟ್ರಂಕ್ ದರೋಡೆ ಮಾಡಿದ್ದರು. ಘಟನೆಯಲ್ಲಿ ಗುಂಡೇಟಿನಿಂದ ಗಿರಿ ವೆಂಕಟೇಶ ಸ್ಥಳದಲ್ಲೇ ಮೃತಪಟ್ಟಿದ್ದರು. ಶಿವಕುಮಾರ ಗಾಯಗೊಂಡಿದ್ದರು. ಗಿರಿ ಹಾಗೂ ಶಿವಕುಮಾರ ಅವರು ಸಿಎಂಎಸ್ ಕಂಪನಿಯಲ್ಲಿ ‘ಕ್ಯಾಶ್ ಕಸ್ಟೋಡಿಯನ್’ ಆಗಿ ಕೆಲಸ ನಿರ್ವಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.