ADVERTISEMENT

ಯಶ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಬಂಧನ

ವ್ಹೀಲಿಂಗ್‌ಗಾಗಿ ‘ಕೆಜಿಎಫ್‌’ ಮಾದರಿ ಬೈಕ್‌; ನಟನಿಗೆ ಉಡುಗೊರೆ ನೀಡಲು ತಯಾರಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 16:06 IST
Last Updated 24 ಆಗಸ್ಟ್ 2020, 16:06 IST
ಜಪ್ತಿ ಮಾಡಲಾಗಿರುವ ಬೈಕ್
ಜಪ್ತಿ ಮಾಡಲಾಗಿರುವ ಬೈಕ್   

ಬೆಂಗಳೂರು: ‘ಕೆಜಿಎಫ್‌’ ಸಿನಿಮಾದಲ್ಲಿ ಬಳಸಿದ್ದ ಬೈಕ್ ಮಾದರಿಯಲ್ಲೇ ತನ್ನ ಬೈಕ್‌ ಬದಲಾಯಿಸಿಕೊಂಡು ಯಶ್ ಅವರಿಗೆ ಉಡುಗೊರೆ ನೀಡಲು ತಯಾರಿ ನಡೆಸುತ್ತಿದ್ದ ‘ಹೊಸಕೋಟೆಯ ಯಶ್ ಅಭಿಮಾನಿಗಳ ಸಂಘ’ದ ಕಾರ್ಯದರ್ಶಿ ಸುನೀಲ್ ಎಂಬುವರು, ಅದೇ ಬೈಕ್‌ ವ್ಹೀಲಿಂಗ್ ಮಾಡಿ ಕೆ.ಆರ್.ಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಹೊಸಕೋಟೆ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದ ಆರೋಪದಡಿ ಸುನೀಲ್‌ ಸೇರಿದಂತೆ ನಾಲ್ವರನ್ನು ಕೆ.ಆರ್.ಪುರ ಸಂಚಾರ ಪೊಲೀಸರು ಬಂಧಿಸಿದ್ದಾರೆ.

‘ಹೊಸಕೋಟೆ ತಾಲ್ಲೂಕಿನ ಕುಂಬಳಹಳ್ಳಿಯ ಸುನೀಲ್, ಕೆಜಿಎಫ್‌ ಮಾದರಿ ಬೈಕ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದಾಗ ಸಿಕ್ಕಿಬಿದ್ದ. ಇನ್ನೊಬ್ಬ ಮುಬಾರಕ್, ತನ್ನ ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಇನ್ನಿಬ್ಬರು ಆರೋಪಿಗಳು ಹೆಸರು ಗೊತ್ತಾಗಿಲ್ಲ. ಆರೋಪಿಗಳಿಂದ ಏಳು ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

’ಆರೋಪಿಗಳು ಹಲವು ಬಾರಿ ವ್ಹೀಲಿಂಗ್ ಮಾಡುತ್ತಿದ್ದರು. ಅದಕ್ಕಾಗಿಯೇ ಬೈಕ್ ಹಾಗೂ ದ್ವಿಚಕ್ರ ವಾಹನಗಳ ವಿನ್ಯಾಸವನ್ನು ಬದಲಾಯಿಸಿಕೊಂಡಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.