ಕನ್ನಡದ ಪ್ರಮುಖ ಲೇಖಕಿ ಎಸ್.ಕೆ. ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಕೃತಿಗೆ ವಿಶ್ವದ ಮೇರು ಸಾಹಿತ್ಯ ಪ್ರಶಸ್ತಿ 2025ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಒಲಿದಿದೆ. ಲಂಡನ್‌ನಲ್ಲಿ ಮಂಗಳವಾರ (ಮೇ 20) ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೃತಿಯ ಅನುವಾದಕರಾದ ದೀಪಾ ಭಸ್ತಿ ಅವರೊಂದಿಗೆ ಬಾನು ಮುಷ್ತಾಕ್ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಾನು ಅವರು ‘ಎದೆಯ ಹಣತೆ’ ಶೀರ್ಷಿಕೆಯಡಿ ಬರೆದಿದ್ದ ಈ ಕೃತಿಯನ್ನು ದೀಪಾ ಭಸ್ತಿಯವರು ‘ಹಾರ್ಟ್ ಲ್ಯಾಂಪ್’ ಹೆಸರಿನಲ್ಲಿ ಅನುವಾದಿಸಿದ್ದಾರೆ. ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯು ‘ಕನ್ನಡದ ಸಾಹಿತ್ಯಕ್ಕೆ ಸಿಕ್ಕ ಗೆಲುವು’ ಎಂದು ಬಾನು ಮುಷ್ತಾಕ್ ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.