ADVERTISEMENT

‘ಲಾಭ’ದ ಖಾತೆ ಬಿಡಲು ಪ್ರಭಾವಿಗಳ ಹಿಂದೇಟು: ಕಗ್ಗಂಟಾಗಿಯೇ ಉಳಿದ ಖಾತೆಹಂಚಿಕೆ ಗೊಂದಲ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 7:54 IST
Last Updated 27 ಡಿಸೆಂಬರ್ 2018, 7:54 IST
   

ಬೆಂಗಳೂರು: 'ಲಾಭ'ದ ಖಾತೆಗಳನ್ನು ಬಿಟ್ಟುಕೊಡಲು 'ಪ್ರಭಾವಿ' ಸಚಿವರು ಹಿಂದೇಟು ಹಾಕುತ್ತಿರುವುದರಿಂದ,ಪ್ರಮಾಣವಚನ ಸ್ವೀಕರಿಸಿ 5–6 ದಿನ ಕಳೆದರೂ ಎಂಟು ಮಂದಿನೂತನ ಸಚಿವರಿಗೆ ಖಾತೆಹಂಚಿಕೆಯಾಗಿಲ್ಲ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಬುಧವಾರ ನಡೆಸಿದ ನಾಯಕರಸಭೆಯಲ್ಲಿ ಒಮ್ಮತ ಮೂಡದ ಕಾರಣ ಖಾತೆ ಹಂಚಿಕೆಗೊಂದಲಇತ್ಯರ್ಥವಾಗಿಲ್ಲ. ಹೀಗಾಗಿ ವೇಣುಗೋಪಾಲ್‌ ಅವರುಸಭೆ ಮುಗಿದ ತಕ್ಷಣವೇ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದರು.

ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರಗ್ರೀನ್ ಸಿಗ್ನಲ್‌ ದೊರೆತ ಬಳಿಕ ನೂತನ ಸಚಿವರ ಖಾತೆಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಬಹುತೇಕ ಇಂದು(ಗುರುವಾರ)ಸಂಜೆಯೊಳಗೆ ಖಾತೆ ಹಂಚಿಕೆ ಫೈನಲ್ ಆಗುವ ಸಾಧ್ಯತೆಯಿದೆ.

ADVERTISEMENT

ಖಾತೆ ಹಂಚಿಕೆ ಗೊಂದಲ ಇಲ್ಲ:ಜಿ.ಪರಮೇಶ್ವರ

ನಮ್ಮಲ್ಲಿ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿಲ್ಲ. ನನ್ನ ಖಾತೆಯಿಂದಾಗಿ ವಿಳಂಬವಾಯಿತು ಅನ್ನೋದು ಸರಿಯಲ್ಲ. ಉಸ್ತುವಾರಿ ವೇಣುಗೋಪಾಲ್ ಅವರುಎರಡು ದಿನ ತಡವಾಗಿ ಬಂದರು. ಹೀಗಾಗಿ ಖಾತೆ ಹಂಚಿಕೆ ವಿಳಂಬವಾಯಿತು. ಇಂದು ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಖಾತೆ ಅಂತಿಮ ಮಾಡಲಿದ್ದಾರೆ.

‘ಇಪ್ಪತ್ನಾಲ್ಕು ಗಂಟೆಗಳಲ್ಲಿಸರ್ಕಾರ ಬೀಳುತ್ತದೆ’ಎಂಬ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ‘ಇಪ್ಪತ್ನಾಲ್ಕು ಗಂಟೆಯ ನಂತರ ನಿಮಗೇ ಎಲ್ಲ ಗೊತ್ತಾಗುತ್ತೆ. ನಮ್ಮ ಶಾಸಕರು ಎಲ್ಲೂ ಹೋಗಿಲ್ಲ, ಜೊತೆಯಲ್ಲೇ ಇದ್ದಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದರು.

ಸಿದ್ದರಾಮಯ್ಯ ಸರಣಿ ಟ್ವೀಟ್..

ಉಮೇಶ್ ಕತ್ತಿ ಹೇಳಿಕೆಗೆ ಸಿದ್ದರಾಮಯ್ಯ ಕಿಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.