ADVERTISEMENT

ಕಲಬುರ್ಗಿ: ಮತದಾನಕ್ಕಾಗಿ ಮುಂಬೈ, ಪುಣೆಯಿಂದ ಬಂದರು!

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 6:29 IST
Last Updated 22 ಡಿಸೆಂಬರ್ 2020, 6:29 IST
ಕಲಬುರ್ಗಿ ತಾಲ್ಲೂಕಿನ ‌ಪಟ್ಟಣದ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮಹಿಳೆಯರು ‌ಮತದಾನ ಮಾಡಿದರು.
ಕಲಬುರ್ಗಿ ತಾಲ್ಲೂಕಿನ ‌ಪಟ್ಟಣದ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮಹಿಳೆಯರು ‌ಮತದಾನ ಮಾಡಿದರು.   

ಕಲಬುರ್ಗಿ: ತಾಲ್ಲೂಕಿನ ಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಅಭ್ಯರ್ಥಿಗಳು ಗ್ರಾಮದಿಂದ ದುಡಿಯಲು ಮಹಾರಾಷ್ಟ್ರದ ಮುಂಬೈ, ಪುಣೆ, ಕಲ್ಯಾಣ್‌ಗೆ ತೆರಳಿದ ಗ್ರಾಮದವರನ್ನು ಸ್ವಂತ ಖರ್ಚಿನಲ್ಲಿ ಕರೆಸಿಕೊಂಡಿದ್ದಾರೆ.

ಸೋಮವಾರ ರಾತ್ರಿಯೇ 25 ಜನ ಮುಂಬೈ, ಪುಣೆಯಿಂದ ಹೊರಟವರು ಇದೀಗ ಗ್ರಾಮ ತಲುಪಿದ್ದು, ಮತದಾನ ‌ಮಾಡುತ್ತಿದ್ದಾರೆ‌.

ಪಟ್ಟಣ ಗ್ರಾಮ ಪಂಚಾಯಿತಿಯ 11 ಸದಸ್ಯ ಸ್ಥಾನಗಳಿಗೆ ಚುನಾವಣೆ ‌ನಡೆಯುತ್ತಿದ್ದು, ಒಂದನೇ ವಾರ್ಡ್‌ನಿಂದ ಸ್ಪರ್ಧಿಸಿರುವ ಅಶೋಕ ಎಂಬುವವರಿಗೆ ಮತ ಹಾಕಿಸಲು ಜನರನ್ನು ಕರೆಸಿಕೊಂಡಿದ್ದೇವೆ ಎಂದು ಅಶೋಕ ಅವರ ಸಹೋದರ ಮಲ್ಲಿಕಾರ್ಜುನ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.