ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ವಹ್ನಿಕುಲ ಕ್ಷತ್ರಿಯರು ಎಂದೇ ಸ್ಪಷ್ಟವಾಗಿ ನಮೂದಿಸಬೇಕು ಎಂದು ವಹ್ನಿಕುಲ ಕ್ಷತ್ರಿಯರ ಗುರುಪೀಠ ತಿಳಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿಶಕ್ತಿ ಮಹಾಸಂಸ್ಥಾನ ಮಠ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕೆ. ಲಕ್ಷ್ಮಣ, ‘ಸಮೀಕ್ಷೆ ನಡೆಯುವ ವೇಳೆ ‘ವಹ್ಮಿಕುಲ ಕ್ಷತ್ರಿಯ’ ಜಾತಿ ಜತೆಗೆ ಉಪ ಜಾತಿಗಳಾದ ಧರ್ಮರಾಜು ಕಾಪು, ಗೌಂಡರ್, ಪಡಿಯಾಜಿ, ಪಳ್ಳಿ, ಸೇರಿ ಸಂಬಂಧಪಟ್ಟ ಉಪಜಾತಿಗಳನ್ನು ಬರೆಯಿಸಬೇಕು. ಇದರಿಂದ ಸಮುದಾಯದ ಜನಸಂಖ್ಯೆ ಮತ್ತು ಸಾಮಾಜಿಕ ಸ್ಥಾನಮಾನದ ಬಗ್ಗೆ ತಿಳಿಯಲು ಸಾಧ್ಯವಾಗಲಿದೆ’ ಎಂದರು.
ವಿಶ್ರಾಂತ ಕುಲಪತಿ ಕೆ. ಆರ್. ವೇಣುಗೋಪಾಲ್, ‘ಸಮೀಕ್ಷೆ ಕೇವಲ ಅಂಕಿ - ಅಂಶಗಳ ಸಂಗ್ರಹವಲ್ಲ, ಬದಲಾಗಿ ಸಮುದಾಯದ ಭವಿಷ್ಯ ಮತ್ತು ರಾಜಕೀಯ ಪ್ರಾತಿನಿಧ್ಯ ನಿರ್ಧರಿಸುವ ನಿರ್ಣಾಯಕ ಹೆಜ್ಜೆಯಾಗಿದೆ. ಇದರಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.