ADVERTISEMENT

ಬೆಂಗಳೂರು: ನ್ಯಾಯಾಂಗ ಬಂಧನಕ್ಕೆ ಶಂಕಿತ ಉಗ್ರರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 21:15 IST
Last Updated 3 ಆಗಸ್ಟ್ 2022, 21:15 IST
   

ಬೆಂಗಳೂರು: ಸಿಸಿಬಿ ವಶದಲ್ಲಿದ್ದ ಶಂಕಿತ ಉಗ್ರರಾದ ಅಖ್ತರ್‌ ಹುಸೇನ್‌ ಲಷ್ಕರ್‌ ಹಾಗೂ ಅಬ್ದುಲ್ ಅಲೀಂ ಮಂಡಲ್‌ನನ್ನು ಬುಧವಾರ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

‘ಮಂಗಳವಾರಕ್ಕೆ 10 ದಿನಗಳ ಕಸ್ಟಡಿ ಅವಧಿ ಮುಕ್ತಾಯವಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ಮಧ್ಯೆ ಮಂಡಲ್‌, ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಬುಧವಾರ ವಿಚಾರಣೆಗೆ ಬರಲಿದೆ’ ಎಂದು ಮೂಲಗಳು
ತಿಳಿಸಿವೆ.

‘ಅಲ್‌ ಕೈದಾ’ ಉಗ್ರ ಸಂಘಟನೆ ಸೇರಲು ಮುಂದಾಗಿದ್ದ ಹಾಗೂ ಆ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಲಷ್ಕರ್‌ನನ್ನು ತಿಲಕ್‌ನಗರ ಹಾಗೂ ಮಂಡಲ್‌ನನ್ನು ಚೆನ್ನೈನಲ್ಲಿ ಬಂಧಿಸಿ, ವಿಚಾರಣೆ ನಡೆಸಿದ್ದರು.

ADVERTISEMENT

‘ಅಫ್ಗಾನಿಸ್ತಾನಕ್ಕೆ ಮತ್ತಷ್ಟು ಯುವಕರೊಂದಿಗೆ ತೆರಳಲುಬಂಧಿತರು ಚಟುವಟಿಕೆ ನಡೆಸುತ್ತಿದ್ದರು. ಪಾಕ್‌ ಹಾಗೂ ಅಫ್ಗನ್‌ನ ಉಗ್ರ ಸಂಘಟನೆಯ ಮುಖಂಡರ ಜತೆಗೆ ವಾಟ್ಸ್‌ಆ್ಯಪ್‌ನಲ್ಲಿ ಚರ್ಚಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.