ADVERTISEMENT

ನಿಗಮ–ಮಂಡಳಿ: ಮುಖ್ಯಮಂತ್ರಿಗೆ ಕಾಂಗ್ರೆಸ್ ಶಾಸಕರಿಂದ ಗಡುವು

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 17:33 IST
Last Updated 5 ಜನವರಿ 2019, 17:33 IST

ಬೆಂಗಳೂರು: ಪಕ್ಷದ ಶಾಸಕರಿಗೆ ರಾಷ್ಟ್ರೀಯ ಅಧ್ಯಕ್ಷರಾಹುಲ್‌ ಗಾಂಧಿ ಅವರು ಹಂಚಿಕೆ ಮಾಡಿದ ನಿಗಮ–ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಒಪ್ಪಿ, ಮಂಗಳವಾರ ಸಂಜೆಯ ಒಳಗೆ ಮುಖ್ಯಮಂತ್ರಿ ಆದೇಶ ಹೊರಡಿಸಬೇಕು ಎಂದು ಕಾಂಗ್ರೆಸ್‌ ಶಾಸಕರು ಗಡುವು ವಿಧಿಸಿದ್ದಾರೆ.

ನಿಗಮ–ಮಂಡಳಿಗಳಿಗೆ ನೇಮಕಗೊಂಡಿರುವ 12 ಶಾಸಕರು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಶನಿವಾರ ಸಂಜೆ ಭೇಟಿ ಮಾಡಿ, ಆದೇಶ ಹೊರಡಿಸಲು ಕುಮಾರಸ್ವಾಮಿ ಹಿಂದೇಟು ಹಾಕುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗಡುವಿನ ಒಳಗೆ ಆದೇಶ ಹೊರಡಿಸದಿದ್ದರೆ ರಾಹುಲ್‌ ಗಾಂಧಿ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡುವುದಾಗಿ ಶಾಸಕರು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಹೈಕಮಾಂಡ್ ಶಿಫಾರಸು ಮಾಡಿ ಎರಡು ವಾರ ಕಳೆದರೂ ಮುಖ್ಯಮಂತ್ರಿ ಆದೇಶ ಹೊರಡಿಸಿಲ್ಲ. ಆ ಮೂಲಕ ರಾಹುಲ್‌ ಗಾಂಧಿ ಅವರಿಗೇ ಅವಮಾನ ಮಾಡಲಾಗಿದೆ ಎಂದೂ ಶಾಸಕರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರು ನಿವಾಸ ‘ಕಾವೇರಿ’ಯಲ್ಲಿ ಕೆಲಹೊತ್ತು ಚರ್ಚೆ ನಡೆಸಿದ ಈ ಶಾಸಕರು, ಮುಖ್ಯಮಂತ್ರಿಯ ನಡೆಯ ವಿರುದ್ಧ ದೂರಿದರು.

ಶಾಸಕರಾದ ಎಸ್‌.ಟಿ. ಸೋಮಶೇಖರ್, ಬೈರತಿ ಬಸವರಾಜು, ಬಿ. ಶಿವಣ್ಣ, ಮುನಿರತ್ನ, ಬೈರತಿ ಸುರೇಶ್, ಡಾ. ಸುಧಾಕರ್, ರಾಘವೇಂದ್ರ ಹಿಟ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.