ADVERTISEMENT

ಚಾಮುಂಡಿಬೆಟ್ಟದ 115 ಅಂಗಡಿಗಳ ತೆರವು: ವ್ಯಾಪಾರಸ್ಥರ ತೀವ್ರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 3:16 IST
Last Updated 12 ಸೆಪ್ಟೆಂಬರ್ 2019, 3:16 IST
   

ಮೈಸೂರು:ಚಾಮುಂಡಿಬೆಟ್ಟದಲ್ಲಿನ‌ 250 ಅಂಗಡಿಗಳ ಪೈಕಿ 115 ಅಂಗಡಿಗಳನ್ನು ಜಿಲ್ಲಾಡಳಿತ ಗುರುವಾರ ಬೆಳಿಗ್ಗೆ 6.30ರಿಂದ ತೆರವು ಕಾರ್ಯಾಚರಣೆ ಕೈಗೊಂಡಿದೆ‌.

ಅಂಗಡಿಗಳ ತೆರವಿಗೆ ವ್ಯಾಪಾರಸ್ಥರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸುಮಾರು 300ಕ್ಕೂ ಅಧಿಕ ಪೊಲೀಸರ ಭದ್ರತೆಯನ್ನು ಕಲ್ಪಿಸಲಾಗಿದೆ.

5 ಜೆಸಿಬಿಗಳು ಬೆಟ್ಟದಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುತ್ತಿವೆ.
ತಹಶೀಲ್ದಾರ ರಮೇಶಬಾಬು ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆಯಲ್ಲಿದೆ.

ADVERTISEMENT

ಈ ಕುರಿತು'ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ರಮೇಶಬಾಬು, '47 ಮಂದಿಗೆ ಈಗಾಗಲೇ ಹೊಸದಾಗಿ ನಿರ್ಮಿಸಲಾಗುತ್ತಿರುವ ಅಂಗಡಿ ಮಳಿಗೆಗಳ ಹಕ್ಕುಪತ್ರವನ್ನು ನೀಡಲಾಗಿದೆ. ಇನ್ನುಳಿದವರಿಗೂ ದಸರೆ ಮುಗಿದ ನಂತರ ನೀಡಲಾಗುವುದು. ರಾತ್ರಿಯೆ ಅಂಗಡಿ ಮಾಲೀಕರಿಗೆ ತೆರವು ಸಂಬಂಧ ಸೂಚನೆ ನೀಡಲಾಗಿತ್ತು. ಅಂಗಡಿಯಲ್ಲಿದ್ದ ಪರಿಕರಗಳನ್ನು ವ್ಯಾಪಾರಸ್ಥರು ನಸುಕಿನ ಹೊತ್ತಿಗೆ ಖಾಲಿ ಮಾಡಿದ್ದರು. ಸದ್ಯ ಖಾಲಿ ಅಂಗಡಿಗಳನ್ನಷ್ಟೆ ತೆರವು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.