ADVERTISEMENT

ಚಂದ್ರಶೇಖರ್ ಸಾವಿನ ಪ್ರಕರಣ: ವಿನಯ್ ಗುರೂಜಿ ಆಶ್ರಮದಲ್ಲಿ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:36 IST
Last Updated 7 ನವೆಂಬರ್ 2022, 19:36 IST
ಎಂ.ಆರ್. ಚಂದ್ರಶೇಖರ್
ಎಂ.ಆರ್. ಚಂದ್ರಶೇಖರ್   

ಚಿಕ್ಕಮಗಳೂರು/ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಎಂ.ಆರ್. ಚಂದ್ರಶೇಖರ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಗೆ ಭಾನುವಾರ ಭೇಟಿ ನೀಡಿ ವಿನಯ್‌ ಗುರೂಜಿ ಆಶ್ರಮದಲ್ಲಿ ಮಾಹಿತಿ ಕಲೆ ಹಾಕಿದೆ.

ಚನ್ನಗಿರಿ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಚಂದ್ರಶೇಖರ್ ಅವರು ಗೌರಿಗದ್ದೆಗೆ ಬಂದುಹೋಗಿದ್ದ ಕುರಿತು ವಿವರ ಪಡೆದಿದ್ದಾರೆ. ಸಿ.ಸಿ. ಟಿವಿ ಕ್ಯಾಮೆರಾ ಫೂಟೇಜ್ ಸಂಗ್ರಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುರೂಜಿ ಮತ್ತು ನಮ್ಮನ್ನು ಪೊಲೀಸರು ವಿಚಾರಿಸಿದರು. ಮಾಹಿತಿ ನೀಡಿದ್ದೇವೆ’ ಎಂದು ವಿನಯ್ ಗುರೂಜಿ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ನಿರೀಕ್ಷೆಯಲ್ಲಿದ್ದೇವೆ. ವರದಿ ಬಂದ ನಂತರವೇ ತನಿಖೆ ಚುರುಕುಗೊಳ್ಳಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.