
ಪ್ರಜಾವಾಣಿ ವಾರ್ತೆನಾಯಕ ಅರಸರ ಶೌರ್ಯದ ಸಂಕೇತದಂತಿದ್ದ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ ಇಂದು ಅಳಿವಿನ ಅಂಚಿನಲ್ಲಿ ನಿಂತಿದೆ. ಕಲ್ಲಿನ ಕೋಟೆ, ಕೋಟೆಯ ಬಾಗಿಲುಗಳು, ಬತ್ತೇರಿಗಳು, ದೇವಾಲಯಗಳನ್ನು ನೋಡಲು ಬರುವ ಪ್ರವಾಸಿಗರು ಇಂದು ಸ್ವಚ್ಛತೆ ಕೊರತೆ, ಭದ್ರತಾ ಸಮಸ್ಯೆ ಮತ್ತು ಅನೈತಿಕ ಚಟುವಟಿಕೆಗಳಿಂದ ಹೆದರಬೇಕಾದ ಪರಿಸ್ಥಿತಿ ಇದೆ. ಕೋಟೆಯ ಆವರಣದ ಭಾಗಗಳು ಖಾಸಗಿಯವರ ಪಾಲಾಗಿವೆ ಮತ್ತು ಪಾಲಾಗುತ್ತಿವೆ. ಕೋಟೆಯ ಸ್ಥಿತಿ–ಗತಿ ಕುರಿತ ಸಂಪೂರ್ಣ ವಿವರ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.