ADVERTISEMENT

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೆದ್ದಾರಿಗಳ ಅಭಿವೃದ್ಧಿ: ಗಡ್ಕರಿಗೆ ಕಾರಜೋಳ ಮನವಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 15:41 IST
Last Updated 6 ಆಗಸ್ಟ್ 2025, 15:41 IST
<div class="paragraphs"><p><strong>ನಿತಿನ್‌ ಗಡ್ಕರಿ ಅವರಿಗೆ ಗೋವಿಂದ </strong>ಕಾರಜೋಳ <strong>ಮನವಿ ಸಲ್ಲಿಸಿದರು</strong></p></div>

ನಿತಿನ್‌ ಗಡ್ಕರಿ ಅವರಿಗೆ ಗೋವಿಂದ ಕಾರಜೋಳ ಮನವಿ ಸಲ್ಲಿಸಿದರು

   

ನವದೆಹಲಿ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿ ಸಂಸದ ಗೋವಿಂದ ಕಾರಜೋಳ ಅವರು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. 

ಮನವಿಯಲ್ಲಿ ಏನಿತ್ತು? 

ADVERTISEMENT

* ಸಿರಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4ರ ಸುಧಾರಣೆ.

* ಚಳ್ಳಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 150ಎ ಮಾರ್ಗವನ್ನು ಒಂದು ಬಾರಿ ಸುಧಾರಣೆ.

* ಸಿರಾ ಪಟ್ಟಣಕ್ಕೆ ಬೈಪಾಸ್ ನಿರ್ಮಾಣ.

* ಮೊಳಕಾಲ್ಮೂರು ಪಟ್ಟಣಕ್ಕೆ ಬೈಪಾಸ್ ನಿರ್ಮಾಣ.

*ಸಿರಾ ಬೈಪಾಸ್‌ನ ಎರಡೂ ಬದಿಗಳಲ್ಲಿ 3.90 ಕಿ.ಮೀ. ಉದ್ದದ 2-ಲೇನ್ ಸರ್ವೀಸ್ ರಸ್ತೆಯ ನಿರ್ಮಾಣ.

* ಹಿರಿಯೂರು ತಾಲ್ಲೂಕಿನ ಪತ್ರೆಹಳ್ಳಿಯಲ್ಲಿ ಅಂಡರ್‌ಪಾಸ್‌ ನಿರ್ಮಾಣ.

* ತುಮಕೂರು ಜಿಲ್ಲೆಯ ಚಿಕ್ಕನಹಳ್ಳಿ ಬಳಿ ಹೆದ್ದಾರಿ ದುರಸ್ತಿ.

* ಹೊಳಲ್ಕೆರೆಯಿಂದ ಅನಗೋಡು ವರೆಗೆ ಹೆದ್ದಾರಿ ವಿಸ್ತರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.