ADVERTISEMENT

ಮಾಧುಸ್ವಾಮಿ ಹಾಗೇ ಹೇಳಲು ಸಾಧ್ಯವಿಲ್ಲ, ಇದೆಲ್ಲ ಶಕುನಿಗಳ ಕೆಲಸ: ಅಶ್ವತ್ಥನಾರಾಯಣ

ಮಾಧುಸ್ವಾಮಿ ಆಡಿಯೊ‌ ನಕಲಿ ಎಂದು ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 7:06 IST
Last Updated 15 ಆಗಸ್ಟ್ 2022, 7:06 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ರಾಮನಗರ: ಸಚಿವ ಮಾಧುಸ್ವಾಮಿ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಅವರದ್ದೇ ಅಲ್ಲ. ಇದೆಲ್ಲ ವಿರೋಧ ಪಕ್ಷಗಳ‌ ಕುತಂತ್ರ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ರಾಮನಗರದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು,ನಮ್ಮ ಸರ್ಕಾರ ಅದ್ಭುತವಾಗಿ‌ ಕೆಲಸ ಮಾಡುತ್ತಿದೆ. ಮಾಧುಸ್ವಾಮಿ ಆ ರೀತಿ ಹೇಳಿರಲು ಸಾಧ್ಯವೇ ಇಲ್ಲ. ಇದೆಲ್ಲ ಶಕುನಿಗಳ ಕೆಲಸ ಎಂದರು.

ಟಿಪ್ಪು ಹೋರಾಟಗಾರ ಅಲ್ಲ: ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ. ತನ್ನ ಅಸ್ತಿತ್ವ ಹಾಗೂ ಸಾಮ್ರಾಜ್ಯ ಉಳಿಸಿಕೊಳ್ಳಲು ಹೋರಾಡಿದ ಒಬ್ಬ ವೀರ ಯೋಧ ಅಷ್ಟೇ ಎಂದು ಅಶ್ವತ್ಥನಾರಾಯಣ ಹೇಳಿದರು.

ADVERTISEMENT

ಟಿಪ್ಪುವಿನ‌ ನರಹತ್ಯೆ ನಮಗೆಲ್ಲರಿಗೂ ತಿಳಿದೇ ಇದೆ. ತನ್ನನ್ನು ಬೆಳೆಸಿದ ಮೈಸೂರು ಅರಸರಿಗೇ ಆತ ದ್ರೋಹ ಬಗೆದಿದ್ದರು. ಮಡಿಕೇರಿ, ಭಟ್ಕಳ, ಕೇರಳ, ಮೇಲುಕೋಟೆ ಜನರು ಎಂದಿಗೂ ಟಿಪ್ಪು ವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸರ್ಕಾರಿ ಜಾಹೀರಾತಿನಿಂದ ನೆಹರು ಭಾವಚಿತ್ರ ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಅವರು ' ನೆಹರು ಹೆಸರು ಕೈಬಿಟ್ಟ‌ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಮುಖ್ಯಮಂತ್ರಿ ಸಹ ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ' ಎಂದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.