ADVERTISEMENT

ಸಂಕ್ರಾಂತಿವರೆಗೂ ಮೈಕೊರೆಯುವ ಚಳಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 20:20 IST
Last Updated 6 ಜನವರಿ 2019, 20:20 IST

ಬೆಂಗಳೂರು: ಮೈ ಕೊರೆಯುವ ಚಳಿ ಸಂಕ್ರಾಂತಿವರೆಗೂ ಮುಂದುವರಿಯುವ ಸಾಧ್ಯತೆಯಿದ್ದು, ಹವಾಮಾನದಲ್ಲಿ ಏರಿಳಿತವೂ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ 3–4 ದಿನಗಳಿಂದ ಚಳಿ ಪ್ರಮಾಣದಲ್ಲಿ ಬದಲಾವಣೆ ಕಾಣುತ್ತಿದೆ. ಆದರೂ ಕೆಲವು ಪ್ರದೇಶಗಳಲ್ಲಿ ಮುಂದಿನ ಕೆಲವು ದಿನ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ವಿಜಯಪುರದಲ್ಲಿ ಭಾನುವಾರ 9 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.‌

ಬೆಳಗಾವಿ, ಮಂಡ್ಯದಲ್ಲಿ ತಲಾ 11, ಬೆಂಗಳೂರು, ಬೀದರ್, ಬಳ್ಳಾರಿ 13, ಕಲಬುರ್ಗಿ, 15, ಗದಗ, ಕಾರವಾರ, ರಾಯಚೂರಿನಲ್ಲಿ ತಲಾ 16 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

ADVERTISEMENT

‘ಉತ್ತರ ಭಾರತದ ಕಡೆಯಿಂದ ದಕ್ಷಿಣದೆಡೆಗೆ ಶೀತಗಾಳಿಮತ್ತಷ್ಟು ಪ್ರಬಲವಾಗಿ ಬೀಸುತ್ತಿರುವುದರಿಂದ ತಾಪಮಾನದಲ್ಲಿ ಕುಸಿತವಾಗಲಿದೆ’ ಎಂದುರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್‌. ಶ್ರೀನಿವಾಸ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.