ADVERTISEMENT

ಲಾಕ್‌ಡೌನ್‌ ಕಠಿಣ ನಿರ್ಬಂಧ ಮುಂದುವರಿಯುವ ಜಿಲ್ಲೆಗಳ ಶಿಕ್ಷಕರಿಗೆ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 10:59 IST
Last Updated 14 ಜೂನ್ 2021, 10:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ನ ಕಠಿಣ ನಿರ್ಬಂಧಗಳು ಮುಂದುವರಿಯಲಿರುವ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳ ಶಿಕ್ಷಕರು ಮಂಗಳವಾರದಿಂದ (ಜೂನ್‌ 15) ಶಾಲೆಗಳಿಗೆ ತೆರಳಿ, ಪ್ರಸ್ತುತ ಸಾಲಿನ ಶೈಕ್ಷಣಿಕ ಪೂರ್ವ ತಯಾರಿ ಕಾರ್ಯಗಳಲ್ಲಿ (ವಿದ್ಯಾರ್ಥಿಗಳ ದಾಖಲಾತಿ) ಕಾರ್ಯಪ್ರವೃತ್ತರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದಾರೆ.

ಕಠಿಣ ನಿರ್ಬಂಧಗಳು ಮುಂದುವರಿಯುವ ಜಿಲ್ಲೆಗಳ (ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕೋಡಿ (ಶೈಕ್ಷಣಿಕ ಜಿಲ್ಲೆ), ಮಂಡ್ಯ ಮತ್ತು ಕೊಡಗು) ಶಿಕ್ಷಕರು ತಮ್ಮ ಮನೆಗಳಿಂದಲೇ ಕಾರ್ಯನಿರ್ವಹಿಸಬೇಕು. ಈ ಜಿಲ್ಲೆಗಳ ಶಿಕ್ಷಕರು ಕಠಿಣ ನಿರ್ಬಂಧಗಳು ಭಾಗಶಃ ತೆರವುಗೊಳಿಸಿದ ತಕ್ಷಣ ಶಾಲೆಗಳಿಗೆ ತೆರಳಿ ಮಕ್ಕಳ ಕಲಿಕಾ ಪೂರ್ವ ತಯಾರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದೂ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ದಾಖಲಾತಿ ಜೂನ್‌ 15ರಿಂದ ಆರಂಭವಾಗಲಿದ್ದು, ಜುಲೈ 1ರಿಂದ ಶೈಕ್ಷಣಿಕ ತರಗತಿಗಳು ಆರಂಭವಾಗಲಿದೆ ಎಂದು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.