ADVERTISEMENT

ಫ್ಯಾಕ್ಟ್ ಚೆಕ್ | 100 ಡಿಗ್ರಿ ಜ್ವರ ಇದ್ದವರು ಇನ್ನು ಮುಂದೆ ಕ್ವಾರಂಟೈನ್ ಆಗಬೇಕೆ?

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 2:24 IST
Last Updated 19 ಏಪ್ರಿಲ್ 2020, 2:24 IST
   

ಬೆಂಗಳೂರು: ಇನ್ನು ಮುಂದೆ 100 ಡಿಗ್ರಿ ಜ್ವರ ಇದ್ದವರನ್ನು ಕ್ವಾರಂಟೈನ್‌ ಮಾಡುವುದನ್ನು ಸರ್ಕಾರ ಕಡ್ಡಾಯ ಮಾಡಿದೆ ಎಂಬ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹಲವರು ಈ ಸುದ್ದಿಯ ಲಿಂಕ್‌ ಮತ್ತು ಸ್ಕ್ರೀನ್‌ ಶಾಟ್‌ಗಳನ್ನು ಸಾಮಾಜಿಕ ತಾಣದ ಎಲ್ಲ ಪ್ರಕಾರಗಳಲ್ಲಿ ಹಂಚಿಕೊಂಡಿದ್ದಾರೆ.

ವೈರಲ್‌ ಆಗಿರುವ ಸುದ್ದಿಯಲ್ಲಿ ಏನಿದೆ?

ADVERTISEMENT

‘ಇನ್ನು ಮುಂದೆ 100 ಡಿಗ್ರಿ ಜ್ವರ ಇದ್ದವರಿಗೂ ಕ್ವಾರಂಟೈನ್‌ ಮಾಡುವ ಹಾಗೂ ಅವರ ಗಂಟಲು ದ್ರವವನ್ನು ಪರಿಶೀಲನೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.’ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಿ.16ರಂದು ವೆಬ್‌ಸೈಟ್‌ವೊಂದರಲ್ಲಿ ಈ ವರದಿ ಪ್ರಕಟವಾಗಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸರ್ಕಾರದಿಂದ ಸ್ಪಷ್ಟನೆ

ಆದರೆ, ಈ ವರದಿಗೆ ಸಂಬಂಧಿಸಿದಂತೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಪಷ್ಟನೆ ನೀಡಿದೆ. ‘ಇಂಥ ಯಾವುದೇ ಕ್ರಮವನ್ನೂ ಸರ್ಕಾರ ಕೈಗೊಂಡಿಲ್ಲ. ಇದು ಸುಳ್ಳು ಸುದ್ದಿ,’ ಎಂದು ಸರ್ಕಾರ ತಿಳಿಸಿದೆ.

ಈ ಬಗ್ಗೆ ಸರ್ಕಾರ ಟ್ವೀಟ್‌ ಮಾಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.