ADVERTISEMENT

Covid-19 Karnataka Update | 14 ಸಾವಿರ ದಾಟಿದ ಕೋವಿಡ್‌ ಮೃತರ ಸಂಖ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಏಪ್ರಿಲ್ 2021, 15:30 IST
Last Updated 23 ಏಪ್ರಿಲ್ 2021, 15:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಹೊಸದಾಗಿ 190 ಜನರು ಮೃತಪಡುವುದರೊಂದಿಗೆ ರಾಜ್ಯದಲ್ಲಿ ಮೃತರ ಸಂಖ್ಯೆ 14 ಸಾವಿರ ದಾಟಿದೆ. ಈವರೆಗೂ 1,128 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಹೊಸದಾಗಿ 26,962 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದ್ದು,ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 12,74,959ಕ್ಕೆ ಏರಿಕೆಯಾಗಿದ್ದರೆ, 14,075 ಜನರು ಮೃತಪಟ್ಟಿದ್ದಾರೆಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಈವರೆಗೆ 10,44,554 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 2,14,311 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಇಂದು ಗುಣಮುಖರಾಗಿ 8,697 ಜನರು ಬಿಡುಗಡೆಯಾಗಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಇಂದು ಹೊಸದಾಗಿ 16,662 ಜನರಿಗೆ ಸೋಂಕು ತಗುಲಿದ್ದು, ಒಟ್ಟಾರೆ 4,60,382 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 6,15,581ಕ್ಕೆ ಏರಿಕೆಯಾಗಿದೆ. ಇಂದು 124 ಜನರು ಮೃತಪಟ್ಟಿದ್ದು, ಈವರೆಗೂ 5,574 ಮಂದಿ ಸಾವಿಗೀಡಾಗಿದ್ದಾರೆ.

ಬಾಗಲಕೋಟೆಯಲ್ಲಿ 88, ಬಳ್ಳಾರಿ 695, ಬೆಳಗಾವಿ 220, ಬೆಂಗಳೂರು ಗ್ರಾಮಾಂತರ 588, ಬೀದರ್ 416, ಚಾಮರಾಜನಗರ 249, ಚಿಕ್ಕಬಳ್ಳಾಪುರ 471, ಚಿಕ್ಕಮಗಳೂರು 229, ಚಿತ್ರದುರ್ಗ 133, ದಕ್ಷಿಣ ಕನ್ನಡ 485, ದಾವಣಗೆರೆ 200, ಧಾರವಾಡ 472, ಗದಗ 74, ಹಾಸನ 248, ಹಾವೇರಿ 74, ಕಲಬುರಗಿ 742, ಕೊಡಗು 295, ಕೋಲಾರ 504, ಕೊಪ್ಪಳ 84, ಮಂಡ್ಯ 519, ಮೈಸೂರು 645, ರಾಯಚೂರು 428, ರಾಮನಗರ 206, ಶಿವಮೊಗ್ಗ 225, ತುಮಕೂರು 1004, ಉಡುಪಿ 282, ಉತ್ತರ ಕನ್ನಡ 181, ವಿಜಯಪುರ 429 ಮತ್ತು ಯಾದಗಿರಿಯಲ್ಲಿ 114 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹೊಸ ಪ್ರಕರಣಗಳು ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.