ADVERTISEMENT

ಕೋವಿಡ್: ಮಕ್ಕಳ ಮೇಲೆ ಅಡ್ಡ ಪರಿಣಾಮ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 0:00 IST
Last Updated 17 ಮಾರ್ಚ್ 2023, 0:00 IST
   

ಬೆಂಗಳೂರು: ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಈಗ ಮಕ್ಕಳ ದೈಹಿಕ ಕಾರ್ಯಕ್ಷಮತೆ ಕ್ಷೀಣಿಸಿದ್ದು, ಕ್ರೀಡೆ ಹಾಗೂ ದೈಹಿಕ ಕಾರ್ಯಚಟುವಟಿಕೆಗಳಲ್ಲಿ ಭಾರಿ ವ್ಯತ್ಯಾಸವಾಗಿದೆ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ.

ಸ್ಪೋರ್ಟ್ಸ್ ವಿಲೇಜ್ ಸಂಸ್ಥೆಯು ಮಕ್ಕಳ ಮೇಲೆ ಕೋವಿಡ್ ಉಂಟು ಮಾಡಿದ ಪರಿಣಾಮದ ಬಗ್ಗೆ ಅಧ್ಯಯನ ಮಾಡಿದೆ. 120 ಶಾಲೆಗಳ 6ರಿಂದ 16 ವರ್ಷದೊಳಗಿನ 20 ಸಾವಿರ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿ, ದೈಹಿಕ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿದೆ. ಸರಾಸರಿ ಐದು ಮಕ್ಕಳಲ್ಲಿ ಇಬ್ಬರ ದೇಹ ಸದೃಢವಾಗಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ.

‘ವ್ಯಕ್ತಿಯ ತೂಕದಲ್ಲಿ ವ್ಯತ್ಯಾಸ, ಮಾಂಸಖಂಡದ ಸಾಮರ್ಥ್ಯ ಕುಗ್ಗಿರುವುದು ಸಹ ಈ ಅಧ್ಯಯನದಿಂದ ದೃಢಪಟ್ಟಿದೆ. ಕೋವಿಡ್ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾ ದಾಗ ಶಾಲೆಗಳನ್ನು ಮುಚ್ಚಲಾಗಿತ್ತು. ಇದರಿಂದ ದೈಹಿಕ ಚಟುವಟಿಕೆ ಮತ್ತು ಹೊರಾಂಗಣ ಆಟದ ಅವಕಾಶಗಳು ಕಡಿಮೆ ಆಗಿದ್ದವು. ಪರಿಣಾಮ ಮಕ್ಕಳ ದೈಹಿಕ ಆರೋಗ್ಯದ ಸಾಮರ್ಥ್ಯ ಕುಗ್ಗಿದೆ’ ಎಂದು ಸಂಸ್ಥೆ ಹೇಳಿದೆ.

ADVERTISEMENT

‘ಶಾಲೆಗಳು ದೀರ್ಘಾವಧಿ ಮುಚ್ಚಿದ್ದರಿಂದ ದೈಹಿಕ ಕಾರ್ಯಚಟುವಟಿಕೆಯೇ ಇರಲಿಲ್ಲ. ಮಕ್ಕಳು ಮನೆಯ ಒಳಗಡೆ ಹೆಚ್ಚಿನ ಅವಧಿ ಕಳೆದಿದ್ದರಿಂದ ನಿಷ್ಕ್ರಿಯರಾಗಿದ್ದರು. ಕೆಲವರಿಗೆ ಈಗ ಕ್ರೀಡಾ ಚಟುವಟಿಕೆಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಸ್ಪೋರ್ಟ್ಸ್ ವಿಲೇಜ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೌಮಿಲ್ ಮಜುಂದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.