ADVERTISEMENT

Covid-19 ಕರ್ನಾಟಕ Updates: ಬೆಂಗಳೂರಿನಲ್ಲಿ 9 ಹೊಸ ಪ್ರಕರಣ; ಒಟ್ಟು 443 ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 7:03 IST
Last Updated 23 ಏಪ್ರಿಲ್ 2020, 7:03 IST
ಆಸ್ಪತ್ರೆಯೊಂದರಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿರುವುದು
ಆಸ್ಪತ್ರೆಯೊಂದರಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿರುವುದು   

ಬೆಂಗಳೂರು: ಏಪ್ರಿಲ್‌ 22ರ ಸಂಜೆ 5ರಿಂದ ಏಪ್ರಿಲ್‌ 23ರ ಮಧ್ಯಾಹ್ನ 12ರ ವರೆಗೂ ರಾಜ್ಯದಲ್ಲಿ ಕೋವಿಡ್‌–19 ದೃಢಪಟ್ಟ 16 ಹೊಸ ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 443 ತಲುಪಿದ್ದು, ಸೋಂಕಿನಿಂದ 17 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಪ್ರಕರಣಗಳ ಪೈಕಿ 141 ಜನ ಗುಣಮುಖರಾಗಿದ್ದಾರೆ.

ಬೆಂಗಳೂರು ನಗರದ ಹೊಂಗಸಂದ್ರದಲ್ಲಿ 9 ಹೊಸ ಪ್ರಕರಣಗಳು ವರದಿಯಾಗಿವೆ. ಮಂಡ್ಯ, ಹುಬ್ಬಳ್ಳಿ ಹಾಗೂ ವಿಜಯಪುರದಲ್ಲಿ ತಲಾ ಇಬ್ಬರು, ಹಾಗೂ ಬಂಟ್ವಾಳದ ಒಬ್ಬರಿಗೆ ಕೋವಿಡ್‌–19 ದೃಢಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.