ADVERTISEMENT

ಪ್ರತಿಭಟನೆ ತಣ್ಣಗಾಗಿಸಿದ ಡಿಸಿಪಿ ಚೇತನ್‌ಗೆ ಆರತಿ ಬೆಳಗಿದ ಸಿಎಎ ಬೆಂಬಲಿಗರು

ರಾಷ್ಟ್ರಗೀತೆ ಹಾಡಿ ಪ್ರತಿಭಟನಕಾರರ ಮನವೊಲಿಸಿದ್ದ ಚೇತನ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 7:23 IST
Last Updated 22 ಡಿಸೆಂಬರ್ 2019, 7:23 IST
ರಾಥೋಡ್ ಅವರನ್ನು ಭಾನುವಾರ ಆರತಿ ಮಾಡಿ, ಗುಲಾಬಿ ಹೂ ನೀಡಿ ಅಭಿನಂದಿಸಿದ ಪೌರತ್ವ (ತಿದ್ದುಪಡಿ) ಕಾಯ್ದೆ ಬೆಂಬಲಿಗರು
ರಾಥೋಡ್ ಅವರನ್ನು ಭಾನುವಾರ ಆರತಿ ಮಾಡಿ, ಗುಲಾಬಿ ಹೂ ನೀಡಿ ಅಭಿನಂದಿಸಿದ ಪೌರತ್ವ (ತಿದ್ದುಪಡಿ) ಕಾಯ್ದೆ ಬೆಂಬಲಿಗರು   

ಬೆಂಗಳೂರು:ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದಪ್ರತಿಭಟನೆ ಕಾವನ್ನುವಿಶಿಷ್ಟ ರೀತಿಯಲ್ಲಿ ತಣ್ಣಗಾಗಿಸಿದಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕಾಯ್ದೆ ಬೆಂಬಲಿಗರುರಾಥೋಡ್ ಅವರನ್ನು ಭಾನುವಾರ ಆರತಿ ಮಾಡಿ, ಗುಲಾಬಿ ಹೂ ನೀಡಿ ಅಭಿನಂದಿಸಿದ್ದಾರೆ.

ನಗರದೆಲ್ಲಡೆ ಮೂರು ದಿನಗಳ ಕಾಲ ಸೆಕ್ಷನ್‌ 144 ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತಾದರೂ ಅದನ್ನು ಲೆಕ್ಕಿಸದೆ ಶುಕ್ರವಾರಕೆಲವು ಸಂಘಟನೆಗಳು ಟೌನ್‌ಹಾಲ್‌ ಬಳಿ ಸೇರಿ ಪ್ರತಿಭಟನೆ ನಡೆಸಿದ್ದವು. ಆ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಕುಳ್ಳಿರಿಸಿಕೊಂಡುಮಾತನಾಡಿದ್ದ ಚೇತನ್‌, ‘ಹಿಂಸೆಯನ್ನು ಸೃಷ್ಟಿಸುವವರು ನಮ್ಮ–ನಿಮ್ಮ ನಡುವೆಯೇ ಇದ್ದಾರೆ. ಹಿಂಸೆ ನಮ್ಮ ಗುರಿಯಾಗಬಾರದು. ನಾನು ನಿಮ್ಮವನೇ ಎನಿಸಿದರೆ, ನನ್ಮ ಮೇಲೆ ಭರವಸೆ ಇದ್ದರೆ ನಾನು ಹೇಳುವ ಹಾಡಿಗೆ ಧ್ವನಿಗೂಡಿಸಿ’ ಎಂದು ರಾಷ್ಟ್ರಗೀತೆ ಹಾಡಿ ಪ್ರತಿಭಟನಕಾರರ ಮನವೊಲಿಸಿದ್ದರು. ಈ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಇಂತಹ ಬಿಗಡಾಯಿಸಿದ ಪರಿಸ್ಥಿತಿಯಲ್ಲಿಯೂ ಜನರಿಗೆ ಅರಿವು ಮೂಡಿಸಿರುವ ಪ್ರಯತ್ನ ಅತ್ಯುತ್ತಮ ಎಂದು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸಹ ಟ್ವೀಟ್‌ ಮಾಡಿದ್ದರು.

ADVERTISEMENT

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.