ADVERTISEMENT

ಗಂಗಾವತಿ |ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಅಪರಾಧಿಗಳಿಗೆ ಮರಣದಂಡನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 10:44 IST
Last Updated 16 ಫೆಬ್ರುವರಿ 2026, 10:44 IST
<div class="paragraphs"><p>ಚರಣಸಾಯಿ,&nbsp;ಹಂದಿಮಲ್ಲ,&nbsp;ಶರಣಬಸವರಾಜ</p></div>

ಚರಣಸಾಯಿ, ಹಂದಿಮಲ್ಲ, ಶರಣಬಸವರಾಜ

   

ಗಂಗಾವತಿ (ಕೊಪ್ಪಳ ಜಿಲ್ಲೆ): ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ ಒಂದು ವರ್ಷದ ಹಿಂದೆ ವಿದೇಶಿ ಮಹಿಳೆ ಹಾಗೂ ಸ್ಥಳೀಯ ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ನಡೆಸಿದ ಮತ್ತು ಒಡಿಶಾದ ಪ್ರವಾಸಿಗನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಲಯವು ಮೂವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.

ಗಂಗಾವತಿಯ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿ (ಚೈತನ್ಯಸಾಯಿ) ಹಾಗೂ ಶರಣಪ್ಪ (ಶರಣು ಬಸವರಾಜ್) ಈ ಶಿಕ್ಷೆಗೆ ಒಳಗಾದ ಅಪರಾಧಿಗಳು.

ADVERTISEMENT

ಕಳೆದ ವರ್ಷದ ಮಾರ್ಚ್ ನಲ್ಲಿ ಸಾಣಾಪುರದಲ್ಲಿ ಇಸ್ರೇಲಿ ಮಹಿಳೆ ಪ್ರವಾಸಕ್ಕೆ ಬಂದಿದ್ದಳು. ಒಡಿಶಾದಿಂದ ಬಿಬಾಶ್ ಎನ್ನುವ ಯುವಕ ಕೂಡ ಪ್ರವಾಸಕ್ಕೆ ಬಂದಿದ್ದ. ಇಸ್ರೇಲಿ ಮಹಿಳೆ, ಒಡಿಶಾ ಪ್ರವಾಸಿಗರ ಜೊತೆ ಅಮೆರಿಕ, ಮಹಾರಾಷ್ಟ್ರದ ಪ್ರವಾಸಿಗರು ಕೂಡ ಇದ್ದರು. ಇವರೆಲ್ಲರನ್ನೂ ಕರೆದುಕೊಂಡು ಸ್ಥಳೀಯ ಹೊಂ ಸ್ಟೇ ಒಡತಿ ಸಾಣಾಪುರದಲ್ಲಿ ಕಾಲುವೆ ಪಕ್ಕದಲ್ಲಿ ಬೆಳದಿಂಗಳ ಸೌಂದರ್ಯ ನೋಡಲು ಕರೆದುಕೊಂಡು ‌ಮಧ್ಯರಾತ್ರಿ ಬಂದಿದ್ದಳು.

ಪಾನಮತ್ತರಾಗಿ ಇದೇ ಮಾರ್ಗದಲ್ಲಿ ‌ಬಂದಿದ್ದ ಅಪರಾಧಿಗಳು ಇಸ್ರೇಲಿ ಮಹಿಳೆ, ಹೊಂಸ್ಟೇ ಒಡತಿ ಮೇಲೆ ಅತ್ಯಾಚಾರ ಎಸಗಿದ್ದರು. ಘಟನೆ ನಡೆದ ಕೆಲವೇ ದಿನಗಳಲ್ಲಿ ಕೃತ್ಯ ಎಸಗಿದವರ ಬಂಧನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.