
ರಾಮಚಂದ್ರ ರಾವ್,
ಕೆಜಿಎಫ್ (ಕೋಲಾರ): ಡಿಜಿಪಿ ರಾಮಚಂದ್ರರಾವ್ ಅವರನ್ನು ಅಮಾನತುಗೊಳಿಸಲಾಗಿದ್ದು, ತನಿಖಾ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸುಳ್ಳೆಂದು ಡಿಜಿಪಿ ಹೇಳಿಕೊಂಡಿದ್ದಾರೆ. ತನಿಖೆ ವರದಿ ಬಂದ ನಂತರ ಗೊತ್ತಾಗಲಿದೆ ಎಂದರು.
ಶಿಡ್ಲಘಟ್ಟ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ರಾಜೀವ್ ಗೌಡರ ಬಂಧನ ಶೀಘ್ರವಾಗಲಿದೆ. ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಎಲ್ಲಿ ಇದ್ದರೂ ಹುಡುಕಿಕೊಂಡು ಬರುತ್ತೇವೆ. ಎಷ್ಟು ದಿನ ತಪ್ಪಿಸಿಕೊಂಡು ಇರುವುದಕ್ಕೆ ಆಗುತ್ತದೆ? ಏಳು ದಿನವಾಗಲೀ, ಹತ್ತು ದಿನವಾಗಲೀ ಹಿಡಿದು ತರಲಾಗುವುದು ಎಂದು ತಿಳಿಸಿದರು.
ಯಾವುದೇ ಸಚಿವರು ಬೆಂಬಲಿಸಲಿ ಕಾನೂನು ಎಲ್ಲರಿಗೂ ಒಂದೇ ಅಲ್ಲವೇ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.