ADVERTISEMENT

ದಿಶಾಂಕ್ ಆ್ಯಪ್ ಮಾಹಿತಿ ವೀಕ್ಷಣೆಗೆ ಮಾತ್ರ -ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 22:00 IST
Last Updated 19 ಫೆಬ್ರುವರಿ 2023, 22:00 IST
   

ದಿಶಾಂಕ್‌ ಆ್ಯಪ್‌ನಲ್ಲಿರುವ ಮಾಹಿತಿಯು ಕೇವಲ ವೀಕ್ಷಣೆಗಾಗಿ ಇದ್ದು ಸರ್ವೆ ನಂಬರ್‌ಗಳ ಗಡಿ ಮತ್ತು ಇತರೆ ಮಾಹಿತಿಯನ್ನು ಯಾವುದೇ ಕಾನೂನಾತ್ಮಕ ಕಾರ್ಯಕ್ಕೆ ಬಳಕೆ ಮಾಡುವಂತಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸುಬ್ಬಾರೆಡ್ಡಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅಶೋಕ, ಪ್ರಸ್ತುತ ಭೂಮಾಪನ ಇಲಾಖೆಯಲ್ಲಿ ಹಿಸ್ಸಾ ಡಿಜಿಟೈಸೇಷನ್‌ ಕಾರ್ಯ ಪ್ರಗತಿಯಲ್ಲಿದ್ದು, ಪ್ರಾಯೋಗಿಕವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಮತ್ತು ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕುಗಳ ಎಲ್ಲಾ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿನ ಹಿಸ್ಸಾ ಡಿಜಿಟೈಸೇಷನ್‌ ಕಾರ್ಯಪೂರ್ಣಗೊಂಡಿದೆ. ಅವುಗಳನ್ನು ದಿಶಾಂಕ್ ಆ್ಯಪ್‌ನಲ್ಲಿ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

ಉಳಿದ ತಾಲ್ಲೂಕುಗಳ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿನ ಹಿಸ್ಸಾ ಡಿಜಿಟೈಸೇಷನ್‌ ಕಾರ್ಯಪ್ರಗತಿಯಲ್ಲಿದ್ದು ಹಂತ ಹಂತವಾಗಿ ಪೂರ್ಣಗೊಳಿಸಿ ದಿಶಾಂಕ್‌ ಆ್ಯಪ್‌ನಲ್ಲಿ ಅಳವಡಿಸಲಾಗುವುದು. ರಾಜ್ಯದಲ್ಲಿ ಡ್ರೋನ್‌ ಫ್ಲೈಯಿಂಗ್‌ ಆಧರಿಸಿದ ರೀ–ಸರ್ವೇ ಕಾರ್ಯ ಪ್ರಾರಂಭವಾಗಿದೆ. ಹಂತ–ಹಂತವಾಗಿ ಎಲ್ಲ ಗ್ರಾಮಗಳ ರೀ ಸರ್ವೇ ಕಾರ್ಯ ಕೈಗೊಂಡು, ಗ್ರಾಮ ನಕಾಶೆಗಳನ್ನು ಜಿಯೋ ರೆಫರೆನ್ಸಿಂಗ್‌ ಮಾಡಿ, ಹೆಚ್ಚಿನ ನಿಖರತೆಯೊಂದಿಗೆ ದಿಶಾಂಕ್‌ ಆ್ಯಪ್‌ನಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.